ಗರುಡವೇಗ & ಗರುಡಬಜಾರ್ ನಿಂದ ದೀಪಾವಳಿ ಆಫರ್ ಗಳು

ಗರುಡವೇಗ & ಗರುಡಬಜಾರ್ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ದೀಪಾವಳಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ.
ಗರುಡವೇಗ & ಗರುಡಬಜಾರ್ ನಿಂದ ದೀಪಾವಳಿ ಆಫರ್ ಗಳು
Updated on

ದೀಪಾವಳಿ ಶುಭಾಶಯಗಳು!!

ಗರುಡವೇಗ & ಗರುಡಬಜಾರ್ ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿ ತುಂಬಿದ ದೀಪಾವಳಿ ಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತದೆ. ನಾವು ವಿಶ್ವದಾದ್ಯಂತ - ಅಮೆರಿಕ, ಯುಕೆ, ಯುಎಈ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಶಿಪ್ಪಿಂಗ್ ಮಾಡುತ್ತಿದ್ದೇವೆ. ಈಗ ನಾವು ಎಲ್ಲಾ ಅರಬ್ ರಾಷ್ಟ್ರಗಳಿಗೆ ರೂ.299/ಕೆಜಿ (ಕನಿಷ್ಟ 10 ಕೆಜಿ) ದರದಲ್ಲಿ ಶಿಪ್ ಮಾಡುತ್ತಿದ್ದೇವೆ.

ನಾವು ಅತ್ಯಂತ ವಿಶ್ವಾಸಾರ್ಹ ಸರಕು ಸಾಗಣೆ ಸೇವೆ ಪೂರೈಕೆದಾರರಾಗಿದ್ದು, ಅಂತಾರಾಷ್ಟ್ರೀಯ (ಭಾರತದಿಂದ ಎಲ್ಲೆಡೆಗೆ ಮತ್ತು ಅಮೆರಿಕಾದಿಂದ ಭಾರತಕ್ಕೆ) ಮತ್ತು ಅಮೆರಿಕಾ ದೇಶೀಯ ಮಾರ್ಗಗಳಲ್ಲಿ ಎಕ್ಸ್ ಪ್ರೆಸ್ ಶಿಪ್ಪಿಂಗ್ ಸೇವೆ ನೀಡುತ್ತೇವೆ.

ನಾವು ಸಾಗರ ಸರಕು ಸಾಗಣೆ ಸೇವೆಯನ್ನೂ ಸಹ ಒದಗಿಸುತ್ತೇವ. ಗಣೇಶ ಚತುರ್ಥಿ ಸಂದರ್ಭದಲ್ಲಿ ಅಮೆರಿಕಾದ ಅತ್ಯಂತ ಜನಪ್ರಿಯ ದೇವಸ್ಥಾನಗಳಿಗೆ 10 ಅಡಿ ಎತ್ತರದ ಗಣೇಶ ವಿಗ್ರಹ & 100 ಕೆಜಿ ಲಡ್ಡುವನ್ನು ಶಿಪ್ ಮಾಡಿದ್ದು ನಮ್ಮ ವಿಶೇಷಗಳಲ್ಲೊಂದು. ನಮ್ಮ ಸೇವಾ ಗುಣಮಟ್ಟ ಮತ್ತು ತ್ವರಿತಗತಿ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಇದೆಲ್ಲಾ ನಿಮ್ಮ ಬೆಂಬಲ, ನಂಬಿಕೆಯಿಂದ ಸಾಧ್ಯವಾಗಿದೆ.

ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು ಉಡುಗೊರೆ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.

ನಾವು ಈ ಹಬ್ಬದ ಸಂದರ್ಭಕ್ಕಾಗಿ ಹೊಸ ಉತ್ಪನ್ನಗಳಾದ ಕೊಂಡಪಲ್ಲಿ & ಈಟಿಕೊಪ್ಪಕ ಬೊಂಬೆಗಳು ಮತ್ತು ಡಿಸೈನರ್ ಬಳೆಗಳನ್ನು ತಂದಿದ್ದೇವೆ. ಗ್ರ್ಯಾಂಡ್ ಸ್ವೀಟ್ಸ್, ಶ್ರೀ ಕೃಷ್ಣ, ಅಡ್ಯಾರ್ ಆನಂದ್ ಭವನ್, ಸ್ವಗೃಹ, ಪುಲ್ಲಾ ರೆಡ್ಡಿ, ವೆಲ್ಲಂಕಿ ಮತ್ತು ವಿಜಯವಾಡದ ಶ್ರೀದೇವಿ ಯಂತಹ ಹೆಸರಾಂತ ಮಾರಾಟಗಾರ ವಿಶೇಷ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ಸಹ ನಮ್ಮಲ್ಲಿ ದೊರೆಯುತ್ತವೆ.

ನಾವು ದೀಪಾವಳಿಗಾಗಿ ನಮ್ಮ ಕೆಲವು ರಿಟರ್ನ್ ಗಿಫ್ಟ್ ಗಳ ಮೇಲೆ 20% ವರಗೆ ವಿಶೇಷ ರಿಯಾಯಿತಿ ಕೊಡುತ್ತಿದ್ದೇವೆ ಹಾಗು "DIWALI" ಕೂಪನ್ ಕೋಡ್ ಬಳಸಿಕೊಂಡು 5% ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಅಲ್ಲದೆ, ನಮ್ಮ ಉತ್ಪನ್ನಗಳು ಮತ್ತು ಸೇವೆಗಳ ಕುರಿತು ನೀವು ನಿಮ್ಮ ಅಮೂಲ್ಯವಾದ ಸಲಹೆ, ಅಭಿಪ್ರಾಯಗಳನ್ನು ಕೊಡಬೇಕಾಗಿ ನಾವು ನಿಮ್ಮಲ್ಲಿ ಕೋರುತ್ತೇವೆ. ಮತ್ತೊಮ್ಮೆ ನಿಮ್ಮೆಲ್ಲರಿಗೂ ಧನ್ಯವಾದಗಳು ಮತ್ತು ದೀಪಾವಳಿಯ ಶುಭಾಶಯಗಳು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com