ಬೆಂಗಳೂರು ಮೂಲದ ಸನೋವಿ ಟೆಕ್ನಾಲಜಿಸ್ ಖರೀದಸಿರುವ ಐಬಿಎಂ

ಹೈಬ್ರಿಡ್ ಕ್ಲೌಡ್ ರಿಕವರಿ ತಂತ್ರಜ್ಞನಾದಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸಾಫ್ಟ್ವೇರ್ ದೈತ್ಯ ಐಬಿಎಂ ಗುರುವಾರ ಬೆಂಗಳೂರು ಮೂಲದ ಸನೋವಿ ಟೆಕ್ನಾಲಜಿಸ್ ಸಂಸ್ಥೆಯನ್ನು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಹೈಬ್ರಿಡ್ ಕ್ಲೌಡ್ ರಿಕವರಿ ತಂತ್ರಜ್ಞನಾದಲ್ಲಿ ತನ್ನ ಕಾರ್ಯಕ್ಷೇತ್ರ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಸಾಫ್ಟ್ವೇರ್ ದೈತ್ಯ ಐಬಿಎಂ ಗುರುವಾರ ಬೆಂಗಳೂರು ಮೂಲದ ಸನೋವಿ ಟೆಕ್ನಾಲಜಿಸ್ ಸಂಸ್ಥೆಯನ್ನು ಕೊಳ್ಳುವ ನಿರ್ಧಿಷ್ಟ ಒಪ್ಪಂದಕ್ಕೆ ಸಹಿ ಹಾಕಿದೆ. 
2016 ರ ಅಂತ್ಯಕ್ಕೆ ಸನೋವಿ ಟೆಕ್ನಾಲಜಿಸ್ ಐಬಿಎಂ ಗ್ಲೋಬಲ್ ಟೆಕ್ನಾಲಜಿ ಸರ್ವಿಸಸ್ ಸಂಸ್ಥೆಯೊಳಗೆ ವಿಲೀನಗೊಳಿಸಿಕೊಳ್ಳುವ ಯೋಜನೆಯನ್ನು ಹಾಕಿಕೊಂಡಿದೆ. 
"ಎರಡು ಸಂಸ್ಥೆಗಳು ಒಟ್ಟಾಗಿ ಮುಂದಿನ ಪೀಳಿಗೆಯ ಹೈಬ್ರಿಡ್ ಕ್ಲೌಡ್ ರಿಕವರಿಯ ಉತ್ಕೃಷ್ಟ ತಂತ್ರಜ್ಞಾನದ ಒದಗಿಸಲಿದ್ದೇವೆ" ಎಂದು ಸನೋವಿ ಸಂಸ್ಥೆಯ ಸಹ ಸಂಸ್ಥಾಪಕ ಚಂದ್ರ ಶೇಖರ್ ಪುಲಮಾರಶೆಟ್ಟಿ ಹೇಳಿದ್ದಾರೆ. 
ಈ ಒಪ್ಪಂದದ ಆರ್ಥಿಕ ವಿವರಗಳನ್ನು ಬಹಿರಂಗಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com