ಮಿಸ್ತ್ರಿ ಆರೋಪ ಆಧಾರ ರಹಿತ, ದುರುದ್ದೇಶಪೂರಿತ: ಟಾಟಾ ಪ್ರತಿಕ್ರಿಯೆ

ಸೈರಸ್ ಮಿಸ್ತ್ರಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ಸಂಸ್ಥೆ, ಸೈರಸ್ ಮಿಸ್ತ್ರಿ ಆರೋಪ ಆಧಾರ ರಹಿತವಾದದ್ದು, ಅಷ್ಟೇ ಅಲ್ಲದೆ ದುರುದ್ದೇಶಪೂರಿತವಾದದ್ದು ಎಂದು ಹೇಳಿದೆ.
ಮಿಸ್ತ್ರಿ ಆರೋಪ ಆಧಾರ ರಹಿತ, ದುರುದ್ದೇಶಪೂರಿತ: ಟಾಟಾ ಪ್ರತಿಕ್ರಿಯೆ
ಮಿಸ್ತ್ರಿ ಆರೋಪ ಆಧಾರ ರಹಿತ, ದುರುದ್ದೇಶಪೂರಿತ: ಟಾಟಾ ಪ್ರತಿಕ್ರಿಯೆ

ಮುಂಬೈ: ಟಾಟಾ ಸಂಸ್ಥೆಯಲ್ಲಿ ಆಂತರಿಕ ಕಲಹದ ಕುರಿತು ವಜಾಗೊಂಡ ಅಧ್ಯಕ್ಷ ಸೈರಸ್ ಮಿಸ್ತ್ರಿ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಟಾಟಾ ಸನ್ಸ್ ಸಂಸ್ಥೆ,  ಸೈರಸ್ ಮಿಸ್ತ್ರಿ ಆರೋಪ ಆಧಾರ ರಹಿತವಾದದ್ದು, ಅಷ್ಟೇ ಅಲ್ಲದೆ ದುರುದ್ದೇಶಪೂರಿತವಾದದ್ದು ಎಂದು ಹೇಳಿದೆ.


ಸಂಸ್ಥೆಯ ಆಡಳಿತದಲ್ಲಿ ಟಾಟಾ ಕುಟುಂಬದ ಹಸ್ತಕ್ಷೇಪ ಹಾಗು ತಮಗೆ ಕಾರ್ಯನಿರ್ವಹಿಸಲು ಮುಕ್ತ ವಾತಾವರಣ ಇಲ್ಲದಿರುವುದರ ಬಗ್ಗೆ ಸೈರಸ್ ಮಿಸ್ತ್ರಿ ಪತ್ರ ಬರೆದು ನಿರ್ದೇಶಕ ಮಂಡಳಿಗೆ ಇ-ಮೇಲ್ ಮೂಲಕ ಕಳಿಸಿದ್ದರು. ಈ ಬೆಳವಣಿಗೆಯ ನಂತರ ಮುಂಬೈ (ಬಿಎಸ್‌ಇ) ಮತ್ತು ರಾಷ್ಟ್ರೀಯ  ಷೇರುಪೇಟೆಗಳು (ಎನ್‌ಎಸ್‌ಇ)  ಸೈರಸ್ ಮಿಸ್ತ್ರಿ ಆರೋಪಿಸಿದ್ದರ ಕುರಿತು ವಿವರ ನೀಡಬೇಕು ಎಂದು ಸೂಚನೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಪ್ರಟಿರ್ಕಿಯೆ ನೀಡಿರುವ ಸಂಸ್ಥೆ ಸೈರಸ್ ಮಿಸ್ತ್ರಿ ಬರೆದಿರುವ ಗೌಪ್ಯ ಪತ್ರ ಬಹಿರಂಗವಾಗಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಷ್ಟೇ ಅಲ್ಲದೆ ಮಿಸ್ತ್ರಿ ಆರೋಪಗಳು ಆಧಾರ ರಹಿತವಾದದ್ದು ಮತ್ತು ದುರುದ್ದೇಶಪೂರಿತವಾದದ್ದು ಎಂದು ವಾದಿಸಿದೆ.

ಟಾಟಾ ಸಂಸ್ಥೆ ಪ್ರತಿಕ್ರಿಯೆಯ ಮುಖ್ಯಅಂಶಗಳು:
  • ಟಾಟಾ ಸನ್ಸ್ ಮಂಡಳಿಗೆ ಸಂಬಂಧಿಸಿದಂತಹ ಗೌಪ್ಯ ಪತ್ರ ಬಹಿರಂಗವಾಗಿರುವುದು ವಿಷಾದನೀಯ ಹಾಗೂ ಘನತೆಯನ್ನು ಕುಗ್ಗಿಸುವ ನಡೆ
  • ಮಿಸ್ತ್ರಿ ತಮ್ಮ ಗೌಪ್ಯ ಪತ್ರದಲ್ಲಿ ದುರುದ್ದೇಶಪೂರಿತ ಆರೋಪ ಮಾಡಿದ್ದು,  ಟಾಟಾ ಸಮೂಹದ ಸಂಸ್ಥೆಗಳಿಗೆ ಹಾಗೂ ಸಂಸ್ಥೆಗೆ ಸಂಬಂಧಿಸಿದ ಕೆಲವು ಗಣ್ಯ ವ್ಯಕ್ತಿಗಳಿಗೆ ಮಾನನಷ್ಟ ಉಂಟಾಗಿದೆ. ಈ ಬಗ್ಗೆ ಸೂಕ್ತ ಪ್ರತಿಕ್ರಿಯೆ ನೀಡಲಾಗುವುದು.
  • 2006 ರಿಂದ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮಿಸ್ತ್ರಿ ಅವರಿಗೆ  ಟಾಟಾ ಸಮೂಹದ ಸಂಸ್ಥೆಗಳನ್ನು ಮುನ್ನಡೆಸುವ ಸಂಪೂರ್ಣ ಅಧಿಕಾರ ನೀಡಲಾಗಿತ್ತು. ಆದರೆ ಅವರನ್ನು ವಜಾಗೊಳಿಸಿದ ನಂತರವಷ್ಟೇ ನಿರ್ಣಯಗಳನ್ನು ಕೈಗೊಳ್ಳಲು ಬಗ್ಗೆ ಮುಕ್ತ ವಾತಾವರಣ ನೀಡಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ದಾಖಲೆಗಳು ಆರೋಪಕ್ಕೆ ಸಂಪೂರ್ಣ ತದ್ವಿರುದ್ಧವಾಗಿವೆ.
  • ಸೈರಸ್ ಮಿಸ್ತ್ರಿ ಬಗ್ಗೆ ಟಾಟಾ ಸನ್ಸ್ ಮಂಡಳಿ ಸದಸ್ಯರು ವಿಶ್ವಾಸ ಕಳೆದುಕೊಂಡಿದ್ದರು.
  • ಟಾಟಾ ಟ್ರಸ್ಟ್ ಗಳಿಗೆ ಮಿಸ್ತ್ರಿ ಬಗೆಗಿನ ವಿಶ್ವಾಸದ ಕೊರತೆ ಹೆಚ್ಚುತ್ತಿರುವುದು ಆತಂಕ ಮೂಡಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com