ಬ್ಯಾಟರಿ ಸ್ಫೋಟ ತೊಂದರೆ; ಗ್ಯಾಲಕ್ಸಿ ನೋಟ್ 7 ಹಿಂಪಡೆಯುತ್ತಿರುವ ಸ್ಯಾಮಸಂಗ್

ಬ್ಯಾಟರಿ ಸ್ಫೋಟಗೊಂಡ ವರದಿಗಳ ನಡುವೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಗ್ಯಾಲಕ್ಸಿ ನೋಟ್ 7 ಮೊಬೈಲ್ ಫೋನ್ ಗಳನ್ನು ದುರವಸ್ಥೆ ಮಾಡಲು ಅವುಗಳನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವ ಸ್ಯಾಮಸಂಗ್ ಸಂಸ್ಥೆ
ಸ್ಯಾಮಸಂಗ್ ಗ್ಯಾಲಕ್ಸಿ ನೋಟ್ 7
ಸ್ಯಾಮಸಂಗ್ ಗ್ಯಾಲಕ್ಸಿ ನೋಟ್ 7
ಸಿಡ್ನಿ: ಬ್ಯಾಟರಿ ಸ್ಫೋಟಗೊಂಡ ವರದಿಗಳ ನಡುವೆ, ಇತ್ತೀಚೆಗಷ್ಟೇ ಬಿಡುಗಡೆಯಾದ ಗ್ಯಾಲಕ್ಸಿ ನೋಟ್ 7 ಮೊಬೈಲ್ ಫೋನ್ ಗಳನ್ನು ದುರವಸ್ಥೆ ಮಾಡಲು ಅವುಗಳನ್ನು ಜಾಗತಿಕವಾಗಿ ಹಿಂಪಡೆಯುತ್ತಿರುವ ಸ್ಯಾಮಸಂಗ್ ಸಂಸ್ಥೆ, ಆಸ್ಟ್ರೇಲಿಯಾದಲ್ಲಿ ಈ ಮಾದರಿಯ 51060 ಫೋನುಗಳನ್ನು ಹಿಂಪಡೆಯುತ್ತಿರುವುದಾಗಿ ತಿಳಿಸಿದೆ. 
"ಸ್ಯಾಮಸಂಗ್ ಗ್ಯಾಲಕ್ಸಿ ನೋಟ್ 7 ಸ್ಮಾರ್ಟ್ ಫೋನ್ ಗಳನ್ನು ಕೊಂಡಿರುವ ಎಲ್ಲ ಗ್ರಾಹಕರು ಕೂಡಲೇ ತಮ್ಮ ಫೋನುಗಳನ್ನು ಆಫ್ ಮಾಡಿ, ತಾವು ಕೊಂಡ ಕಡೆ ಅದನ್ನು ಹಿಂದಿರುಗಿಸಿ, ಬೇರೆ ಫೋನ್ ಸಿಗುವವರೆಗೂ ಬದಲಿ ಫೋನುಗಳನ್ನು ಬಳಸುವಂತೆ" ಸ್ಯಾಮಸಂಗ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ. 
ಆಸ್ಟ್ರೇಲಿಯಾದಲ್ಲಿ ಬ್ಯಾಟರಿ ಸ್ಫೋಟಗೊಂಡ ಯಾವುದೇ ಘಟನೆ ವರದಿಯಾಗಿಲ್ಲವಾದರೂ, ಎಚ್ಚರಿಕೆಯಾಗಿ ಜಾಗತಿಕವಾಗಿ ತೆಗೆದುಕೊಂಡಿರುವ ಈ ಕ್ರಮದಲ್ಲಿ ಆಸ್ಟ್ರೇಲಿಯಾದಲ್ಲಿಯೂ 51060 ಫೋನುಗಳನ್ನು ಹಿಂಪಡೆಯಲಾಗುತ್ತಿದೆ ಎಂದು ಸಂಸ್ಥೆ ತಿಳಿಸಿದೆ. 
59,990 ರು ಬೆಲೆಯ ಈ ಫೋನು 10 ದೇಶಗಳಲ್ಲಿ ಮಾರಾಟಕ್ಕೆ ಲಭ್ಯವಾಗಿತ್ತು. ಇಲ್ಲಿಯವರೆಗೂ ಮಾರಾಟವಾಗಿರುವ 2.5 ದಶಲಕ್ಷ ನೋಟ್ 7 ಫೋನುಗಳನ್ನು ಹಿಂಪಡೆದು ರಿಪೇರಿ ಮಾಡುವುದಾಗಿ ಸಂಸ್ಥೆ ತಿಳಿಸಿದೆ. ಇದಕ್ಕಾಗಿ ಸಂಸ್ಥೆ ಸುಮಾರು 1 ಬಿಲಿಯನ್ ಡಾಲರ್ ವ್ಯಯಿಸಲಿದೆ. 
"ಗ್ಯಾಲೆಕ್ಸಿ ನೋಟ್ 7 ಕೊಂಡ ಗ್ರಾಹಕರಿಗೆ ಹೊಸ ಗ್ಯಾಲೆಕ್ಸಿ ನೋಟ್ 7 ಕೊಡಲಾಗುವುದು ಮತ್ತು ಅದನ್ನು ಬದಲಿಸುವವರಿಗೆ ತಾತ್ಕಾಲಿಕ ಫೋನು ನೀಡಲಾಗುವುದು ಅಥವಾ ಸಂಪೂರ್ಣವಾಗಿ ಹಣ ಹಿಂದಿರುಗಿಸಲಾಗುವುದು" ಎಂದು ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಆಸ್ಟ್ರೇಲಿಯಾ ಹೇಳಿಕೆಯಲ್ಲಿ ತಿಳಿಸಿದೆ. 
ಫೋನ್ ಹಿಂದಿರುಗಿಸಿದ ಗ್ರಾಹಕರಿಗೆ ಮೂರರಿಂದ ನಾಲ್ಕು ವಾರಗಳಲ್ಲಿ ಫೋನು ಬದಲಿಸುವುದಾಗಿ ಗ್ರಾಹಕರಿಗೆ ಸ್ಯಾಮಸಂಗ್ ಸಂಸ್ಥೆ ಭರವಸೆ ನೀಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com