ಸ್ಯಾಮಸಂಗ್ ಪ್ರಿಂಟರ್ ವ್ಯವಹಾರನ್ನು 1 ಬಿಲಿಯನ್ ಡಾಲರ್ ಒಪ್ಪಂದದಲ್ಲಿ ಕೊಳ್ಳಲಿರುವ ಎಚ್ ಪಿ

ತಮ್ಮ ಮುದ್ರಕ ವ್ಯವಹಾರವನ್ನು ಅಮೆರಿಕಾ ಸಂಸ್ಥೆ ಎಚ್ ಪಿಗೆ ಮಾರಾಟ ಮಾಡುತ್ತಿರುವುದಾಗಿ ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಸೋಮವಾರ ಘೋಷಿಸಿದೆ. ಈ ಒಪ್ಪಂದದ ಮೊತ್ತವನ್ನು ಘೋಷಿಸಿಲ್ಲವಾದರೂ,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಿಯೋಲ್: ತಮ್ಮ ಮುದ್ರಕ ವ್ಯವಹಾರವನ್ನು ಅಮೆರಿಕಾ ಸಂಸ್ಥೆ ಎಚ್ ಪಿಗೆ ಮಾರಾಟ ಮಾಡುತ್ತಿರುವುದಾಗಿ ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್ ಸೋಮವಾರ ಘೋಷಿಸಿದೆ. ಈ ಒಪ್ಪಂದದ ಮೊತ್ತವನ್ನು ಘೋಷಿಸಿಲ್ಲವಾದರೂ, ಮಾರುಕಟ್ಟೆ ಪಂಡಿತರ ಪ್ರಕಾರ ಇದು 1.05 ಬಿಲಿಯನ್ ಡಾಲರ್ ಒಪ್ಪಂದ ಎನ್ನಲಾಗಿದೆ. 
"ನಾವು ಬಲಿಷ್ಠವಾಗಿರುವ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚು ಗಮನ ಹರಿಸಲು" ಈ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸ್ಯಾಮಸಂಗ್ ತಿಳಿಸಿದೆ. ಈ ನೂತನ ಒಪ್ಪಂದದಲ್ಲಿ ಎಚ್ ಪಿ ಸಂಸ್ಥೆಯಿಂದ ಪ್ರಿಂಟರ್ ಗಳನ್ನು ಕೊಂಡು ಕೊರಿಯಾದಲ್ಲಿ ವ್ಯವಹಾರ ಮಾಡಲಿದೆ ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. 
"ಷೇರುದಾರರ ಒಪ್ಪಿಗೆ ಪಡೆದು ನವೆಂಬರ್ 1 ರಂದು ಪ್ರಿಂಟಿಂಗ್ ವ್ಯವಹಾರವನ್ನು ಪ್ರತ್ಯೇಕ ಸಂಸ್ಥೆಯಾಗಿ ಸ್ಥಾಪಿಸಿ, 100% ಷೇರುಗಳನ್ನು ಮತ್ತು ಸಂಸ್ಥೆಯ ಹೊರ ದೇಶದ ಆಸ್ತಿಯನ್ನು ಎಚ್ ಪಿ ಸಂಸ್ಥೆಗೆ ಮಾರಾಟ ಮಾಡಲಿದ್ದೇವೆ" ಎಂದು ಹೇಳಿಕೆ ತಿಳಿಸಿದೆ. 
ನಿಯಂತ್ರಣ ಅಧಿಕಾರಿಗಳ ಒಪ್ಪಿಗೆ ಪಡೆದ ಮೇಲೆ ಈ ಒಪ್ಪಂದ ಮುಂದಿನ ಒಂದು ವರ್ಷದೊಳಗೆ ಸಂಪೂರ್ಣಗೊಳ್ಳಲಿದೆ ಎಂದು ತಿಳಿದುಬಂದಿದೆ. 
ಸ್ಯಾಮಸಂಗ್ ಪ್ರಿಂಟಿಂಗ್ ವ್ಯವಹಾರದಲ್ಲಿ 6000 ಉದ್ಯೋಗಿಗಳಿದ್ದು, ಚೈನಾದಲ್ಲಿ ಉತ್ಪಾದನಾ ಕೇಂದ್ರ ಮತ್ತು ಜಾಗತಿಕವಾಗಿ 50 ಮಾರಾಟ ಕಚೇರಿಗಳನ್ನು ಹೊಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com