ಮುಂಬೈ: ಭಾರತದ ದೂರಸಂಪರ್ಕ ವಲಯದಲ್ಲಿ ಅತಿ ದೊಡ್ಡ ಒಪ್ಪಂದವೆಂಬಂತೆ ದೇಶದ ಮೂರನೇ ಅತಿದೊಡ್ಡ ಮೊಬೈಲ್ ಪೂರೈಕೆ ಕಂಪೆನಿಯಾಗಿ ಹೊರಹೊಮ್ಮಲು ಸಜ್ಜಾಗಿರುವ ರಿಲಯನ್ಸ್ ಕಮ್ಯುನಿಕೇಷನ್ ಏರ್ ಸೆಲ್ ಜೊತೆಗೆ ಸುಮಾರು 65 ಸಾವಿರ ಕೋಟಿ ರೂಪಾಯಿ ಒಪ್ಪಂದ ಮಾಡಿಕೊಂಡಿದೆ.
ರಿಲಯನ್ಸ್ ಕಮ್ಯುನಿಕೇಷನ್ ಮತ್ತು ಏರ್ ಸೆಲ್ ನ ಕೇಂದ್ರ ಕಂಪೆನಿಯಾದ ಮಲೇಷಿಯಾದ ಮಾಕ್ಸಿಸ್ ಕಂಪೆನಿಗಳು ಒಟ್ಟಾದ ನಂತರ ಸಮಾರ್ಧಗಳ ಒಡೆತನ ಹೊಂದಲಿವೆ ಎಂದು ಕಂಪೆನಿಗಳು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ.
ಈ ವಹಿವಾಟಿನಿಂದ ರಿಲಯನ್ಸ್ ಕಮ್ಯುನಿಕೇಷನ್ ನ ಸಾಲ 20 ಸಾವಿರ ಕೋಟಿಗೆ ಇಳಿಯಲಿದ್ದು, ಏರ್ ಸೆಲ್ ನ ಸಾಲ 4 ಸಾವಿರ ಕೋಟಿಗೆ ಇಳಿಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿವೆ.