
ನವದೆಹಲಿ: 2002 ಎಪ್ರಿಲ್ 1 ಕ್ಕೂ ಮೊದಲು ಗ್ರಾಮೀಣ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿ ಬಿಎಸ್ ಎನ್ ಎಲ್ ಗೆ ನೀಡಬೇಕಿದ್ದ 1,250 ಕೋಟಿ ರು ಪರಿಹಾರ ಹಣವನ್ನು ಕೇಂದ್ರ ಸಂಪುಟ ಬಿಡುಗಡೆಗೆ ತೀರ್ಮಾನಿಸಿದೆ.
1,250 ಕೋಟಿ ರು ಸಬ್ಸಿಡಿ ಹಣವನ್ನು ಬಿಎಸ್ ಎನ್ ಎಲ್ ಗೆ ನೀಡಲು ಕೇಂದ್ರ ಸಂಪುಟ ಅನುಮೋದನೆ ನೀಡಿದೆ ಎಂದು ಸರ್ಕಾರದ ಪ್ರಧಾನ ಕಾರ್ಯದರ್ಶಿ ಫ್ರಾಂಕ್ ನರೋಹನ ಟ್ವೀಟ್ ಮಾಡಿದ್ದಾರೆ.
2002 ನೇ ಏಪ್ರಿಲ್ ಗು ಮುನ್ನ ಗ್ರಾಮಾಂತರ ಪ್ರದೇಶಗಳಲ್ಲಿ ಸ್ಥಿರ ದೂರವಾಣಿ ಸಂಪರ್ಕ ನೀಡಿದ್ದ ಬಿಎಸ್ ಎನ್ ಎಲ್ ಗೆ ಸಾರ್ವತ್ರಿಕ ಸೇವೆ ಬಾಧ್ಯತಾ ನಿಧಿ ಅನ್ವಯ ಸಬ್ಸಿಡಿ ನೀಡಲಾಗಿದೆ.
ಗ್ರಾಮೀಣ ಭಾಗದಲ್ಲಿ ವೈರ್ ಲೈನ್ ಸಂಪರ್ಕ ಕಲ್ಪಿಸಲು 2ಸಾವಿರ ಕೋಟಿ ನೀಡಿ ಬೆಂಬಲಿಸುವಂತೆ ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಕೇಂದ್ರ ಸರ್ಕಾರವನ್ನು ಕೇಳಿತ್ತು. 2002 ಏಪ್ರಿಲ್ 1 ರ ಒಳಗೆ ಸ್ಥಿರ ದೂರವಾಣಿ ಸಂಪರ್ಕ ನೀಡಲು ಬಿಎಸ್ ಎನ್ ಎಲ್ ಒಟ್ಟು 4,876 ಕೋಟಿ ರು ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿತ್ತು.
2002, 2011- 12, ಹಾಗೂ 2012-13 ನೇ ಸಾಲಿನ ಸಂಪರ್ಕಗಳಿಗಾಗಿ ಬಿಎಸ್ಎನ್ಎಲ್ ಪ್ರಸ್ತಾಪಿಸಿದ್ದ 1,593 ಕೋಟಿ ಸಬ್ಸಿಡಿ ಹಣದ ಜೊತೆ ಕೇಂದ್ರ ಸರ್ಕಾರ 1,256 ಕೋಟಿ ಹಣ ನೀಡಲು ಮುಂದಾಗಿದೆ.
ಈ ಸಂಪರ್ಕಗಳಿಗಾಗಿ ಜುಲೈ 17,2011 ರವರೆಗೂ ಟೆಲಿಕಾಂ ಇಲಾಖೆ ಹಣ ಸಂದಾಯ ಮಾಡಿತ್ತು. ಬಿಎಸ್ ಎನ್ ಎಲ್ 1,500 ಕೋಟಿ ಸಬ್ಸಿಡಿ ಹಣ್ ಮತ್ತು ಕೇಂದ್ರ ನೀಡಬೇಕಿದ್ದ 1,250 ಕೋಟಿ ಹಣವನ್ನು ನೀಡಲು ಕೇಂದ್ರ ಸಂಪುಟ ಅನುಮತಿ ನೀಡಿದೆ.
Advertisement