ಜಿಯೋಗೆ ಸೆಡ್ಡು: ಏರ್‌ಟೆಲ್‌ ನಿಂದ 90 ದಿನಗಳಿಗೆ 1,494 ರು,ಗೆ 4ಜಿ ಅನಿಯಮಿತ ಡಾಟಾ

ಜಿಯೋ ಅನಿಯಮಿತ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್‌ ನಷ್ಟಕ್ಕೆ ಸಿಲುಕಿದ್ದು ಇದೀಗ ಜಿಯೋಗೆ ಪೈಪೋಟಿ ನೀಡುವ ಸಲುವಾಗಿ...
ಭಾರತಿ ಏರ್‌ಟೆಲ್‌
ಭಾರತಿ ಏರ್‌ಟೆಲ್‌
ಜಿಯೋ ಅನಿಯಮಿತ ಸೇವೆಯಿಂದಾಗಿ ದೇಶದ ಅತಿ ದೊಡ್ಡ ಮೊಬೈಲ್ ಸೇವಾ ಕಂಪನಿ ಏರ್‌ಟೆಲ್‌ ನಷ್ಟಕ್ಕೆ ಸಿಲುಕಿದ್ದು ಇದೀಗ ಜಿಯೋಗೆ ಪೈಪೋಟಿ ನೀಡುವ ಸಲುವಾಗಿ ಅಸ್ತಿತ್ವದಲ್ಲಿರುವ ಬಳಕೆದಾರರಿಗೆ 1,495 ರುಪಾಯಿಯಲ್ಲಿ 4ಜಿ ಅನಿಮಯಿತ ಸೇವೆಯನ್ನು ಒದಗಿಸುತ್ತಿದೆ. 
4ಜಿ ಬಳಕೆದಾರರು 1,495 ರುಪಾಯಿಯಲ್ಲಿ ಮೂರು ತಿಂಗಳಿಗೆ ಉಚಿತ ಡಾಟಾ ನೀಡಲು ಮುಂದಾಗಿದೆ. ಇನ್ನು ನೂತನ ಬಳಕೆದಾರರು ಮೊದಲಿಗೆ 1,494 ರುಪಾಯಿ ರಿಚಾರ್ಚ್ ಮಾಡುವ ಮೂಲಕ ಈ ಸೇವೆಯನ್ನು ಪಡೆಯಬಹುದಾಗಿದೆ. 
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ಭಾರತಿ ಏರ್‌ಟೆಲ್‌ ನ ಭಾರತ ಮತ್ತು ದಕ್ಷಿಣ ಏಷ್ಯಾದ ನಿರ್ದೇಶಕ ಅಜಯ್ ಪುರಿ ಅವರು ನಮ್ಮ ಗ್ರಾಹಕರಿಗೆ ವಿಶೇಷ ಸೌಲಭ್ಯಗಳನ್ನು ನೀಡಲು ಸಂಸ್ಥೆ ನಿರ್ಧರಿಸಿದೆ ಎಂದು ಹೇಳಿದ್ದಾರೆ. 
ಸದ್ಯ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈ ನೂತನ 4ಜಿ ಸೇವೆಯನ್ನು ಏರ್‌ಟೆಲ್‌ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ದೇಶಾದ್ಯಂತ ಈ ಸೌಲಭ್ಯ ಸಿಗಲಿದೆ. ನೂತನ ಸೌಲಭ್ಯದಿಂದಾಗಿ 90 ದಿನಗಳಿಗೆ 30 ಜಿಬಿ ಡಾಟಾವನ್ನು ಏರ್‌ಟೆಲ್‌ ನೀಡುತ್ತಿದ್ದು ಈ ಮುಕ್ತಾಯಗೊಂಡ ನಂತರ ವೇಗವನ್ನು ಕಡಿತಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 
ಜಿಯೋ ರಿಲಯನ್ಸ್ ತಮ್ಮ ಗ್ರಾಹಕರಿಗಾಗಿ 500 ರುಪಾಯಿಯಲ್ಲಿ ತಿಂಗಳಿಗೆ 10 ಜಿಬಿ 4ಜಿ ಡಾಟಾ ನೀಡುತ್ತಿದ್ದು, ಇದೀಗ ಈ ಯೋಜನೆಗೆ ವಿರುದ್ಧವಾಗಿ ಏರ್‌ಟೆಲ್‌ ಈ ಸೌಲಭ್ಯವನ್ನು ಘೋಷಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com