ಭಾರತದ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್ ಗೆ ಇಳಿಕೆ

ಭಾರತದ ವಿದೇಶಿ ವಿನಿಮಯ ಮೀಸಲು ಮತ್ತೆ ಕುಗ್ಗಿದ್ದು, ಸೆ.16 ರಂದು ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್..
ಭಾರತದ ವಿದೇಶಿ ವಿನಿಮಯ ಮೀಸಲು
ಭಾರತದ ವಿದೇಶಿ ವಿನಿಮಯ ಮೀಸಲು

ಚೆನ್ನೈ: ಭಾರತದ ವಿದೇಶಿ ವಿನಿಮಯ ಮೀಸಲು ಮತ್ತೆ ಕುಗ್ಗಿದ್ದು, ಸೆ.16 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್ ಗೆ ಇಳಿಕೆಯಾಗಿದೆ.

ಸೆ.16 ರಂದು ಭಾರತದ ವಿದೇಶಿ ವಿನಿಮಯ ಮೀಸಲು 369.60 ಬಿಲಿಯನ್ ಡಾಲರ್ ನಷ್ಟಿದೆ ಎಂದು ಆರ್ ಬಿ ಐ ಘೋಷಿಸಿದೆ. ವಿದೇಶಿ ಕರೆನ್ಸಿ ಸ್ವತ್ತುಗಳು 344.07 ಬಿಲಿಯನ್ ಡಾಲರ್ ನಷ್ಟಿದ್ದು ಚಿನ್ನ 21.64 ಬಿಲಿಯನ್ ಡಾಲರ್ ನಷ್ಟಿದೆ. ಇನ್ನು ವಿಶೇಷ ಹಿಂಪಡೆತ ಹಕ್ಕುಗಳು, 1.49 ಬಿಲಿಯನ್ ಡಾಲರ್ ನಷ್ಟಿದ್ದು ಐಎಂ ಎಫ್ ನಲ್ಲಿ 2.39 ಬಿಲಿಯನ್ ಡಾಲರ್ ಮೀಸಲು ನಿಯತಾಂಶ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com