ಮುಂದಿನ ದೂರಸಂಪರ್ಕ ತರಂಗಾಂತರ ಹರಾಜಿಗೆ ಏಳು ಸಂಸ್ಥೆಗಳು ಅರ್ಹ

ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿರುವ ಮುಂದಿನ ದೂರಸಂಪರ್ಕ ತರಂಗಾಂತರ ಹರಾಜಿನಲ್ಲಿ ಭಾಗವಹಿಸಲು ಏಳು ದೂರಸಂಪರ್ಕ ಸೇವಾ ಸಂಸ್ಥೆಗಳು ಅರ್ಹತೆ ಪಡೆದಿವೆ ಎಂದು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಅಕ್ಟೋಬರ್ 1 ರಿಂದ ಪ್ರಾರಂಭವಾಗಲಿರುವ ಮುಂದಿನ ದೂರಸಂಪರ್ಕ ತರಂಗಾಂತರ ಹರಾಜಿನಲ್ಲಿ ಭಾಗವಹಿಸಲು ಏಳು ದೂರಸಂಪರ್ಕ ಸೇವಾ ಸಂಸ್ಥೆಗಳು ಅರ್ಹತೆ ಪಡೆದಿವೆ ಎಂದು ದೂರಸಂಪರ್ಕ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ. 
ಈ ಹರಾಜಿನಲ್ಲಿ ಭಾಗವಹಿಸಲು ಅರ್ಹತೆ ಪಡೆದಿರುವ ಸಂಸ್ಥೆಗಳು ಭಾರತಿ ಏರ್ಟೆಲ್, ವೊಡಾಫೋನ್ ಇಂಡಿಯಾ, ರಿಲಾಯನ್ಸ್ ಜಿಯೋ ಇನ್ಫೋಕಾಮ್, ರಿಲಾಯನ್ಸ್ ಕಮ್ಮ್ಯುನಿಕೇಷನ್ಸ್, ಐಡಿಯಾ ಸೆಲ್ಯುಲಾರ್, ಏರ್ಸೆಲ್ ಮತ್ತು ಟಾಟಾ ಟೆಲಿ ಸರ್ವಿಸಸ್. 
ದೇಶದ ಯಾವುದೇ ಭಾಗದಲ್ಲಿ ರಿಲಾಯನ್ಸ್ ಜಿಯೋ ಇನ್ಫೋಕಾಮ್ ಹರಾಜಿನಲ್ಲಿ ತರಂಗಾತರಗಳನ್ನು ಖರೀದಿಸಬಹುದಾಗಿದ್ದರೆ, ರಿಲಾಯನ್ಸ್ ಕಮ್ಮ್ಯುನಿಕೇಷನ್ಸ್ ಈಶಾನ್ಯ ರಾಜ್ಯಗಳು ಮತ್ತು ಅಸ್ಸಾಂ ಹೊರತುಪಡಿಸಿ ತರಂಗಾಂತರಗಳನ್ನು ಕೊಳ್ಳಬಹುದಾಗಿದೆ. 
ಅತಿ ಹೆಚ್ಚು ಮೊತ್ತ ಅಂದರೆ 6500 ಕೋಟಿ ಠೇವಣಿ ಇಟ್ಟಿರುವ ರಿಲಾಯನ್ಸ್ ಜಿಯೋ ಇನ್ಫೋಕಾಮ್, ಅತಿ ಹೆಚ್ಚು ಅರ್ಹತಾ ಅಂಕಗಳನ್ನು (44506) ಪಡೆದಿದೆ. 
2,354.55 ಮೆಗಾ ಹರ್ಟ್ಜ್ ತರಂಗಾಂತರಗಳು ಈಗ ಮಾರಾಟಕ್ಕೆ ಲಭ್ಯವಾಗಿದೆ. ಈ ಹರಾಜು ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ 5.66 ಲಕ್ಷ ಕೋಟಿ ಆದಾಯ ಬರುವುದಾಗಿ ಅಂದಾಜಿಸಲಾಗಿದೆ. 
ಸೆಪ್ಟೆಂಬರ್ 26 ಮತ್ತು 27 ರಂದು ಅಣಕು ಹರಾಜು ಪ್ರಕ್ರಿಯೆ ನಡೆಯಲಿದ್ದು, ಅಕ್ಟೋಬರ್ 1 ರಂದು ಅಧಿಕೃತ ಹರಾಜು ಪ್ರಕ್ರಿಯೆ ನಡೆಯಲಿದೆ. ಈ ಹರಾಜಿಗೆ ಎಂಜಂಕ್ಷನ್ ಸರ್ಕಾರದ ಪರವಾಗಿ ಪ್ರಚಾರ ನಡೆಸಿದೆ. 
ಹರಾಜಾದ ತಂರಂಗಾತಂರ ಸಂಸ್ಥೆಗಳೊಂದಿಗೆ 20 ವರ್ಷಗಳ ಕಾಲ ಉಳಿಯಲಿವೆ. ಸೇವಾ ಸಂಸ್ಥೆಗಳಿಗೆ ಒಂದೇ ಬಾರಿ ಸಂಪೂರ್ಣ ಮೊತ್ತವನ್ನು ನೀಡುವ ಅಥವಾ ಕಂತುಗಳಲ್ಲಿ ನೀಡುವ ಅವಕಾಶವನ್ನೂ ಸರ್ಕಾರ ಒದಗಿಸಿದೆ. 
ಜೂನ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಹರಾಜು ಪ್ರಕ್ರಿಯೆಯ ನಿಯಮಗಳಿಗೆ ಒಪ್ಪಿಗೆ ನೀಡಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com