ಗಡಿ ನಿಯಂತ್ರಣ ರೇಖೆಯಲ್ಲಿ ಭಾರತದ 'ಚಿಕಿತ್ಸಕ ದಾಳಿ'; ಷೇರುಪೇಟೆ ಆಯೋಮಯ

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದೆ ಎಂಬ ಸುದ್ದಿಗೆ ಭಾರತೀಯ ಷೇರುಪೇಟೆ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತೀಯ ಸೇನೆ ಉಗ್ರರ ಅಡಗುತಾಣಗಳ ಮೇಲೆ ಚಿಕಿತ್ಸಕ ದಾಳಿ ನಡೆಸಿ ಹಲವು ಉಗ್ರರನ್ನು ಕೊಂದು ಹಾಕಿದೆ ಎಂಬ ಸುದ್ದಿಗೆ ಭಾರತೀಯ ಷೇರುಪೇಟೆ ನಡುಗಿದೆ. 
ದಿನದ ಪ್ರಾರಂಭಗದಲ್ಲಿ ಶಕ್ತಿಯುತವಾಗಿ ಮುನ್ನುಗ್ಗುತ್ತಿದ್ದ ಬಿ ಎಸ್ ಇ ಸೂಚ್ಯಂಕ ಭಾರತೀಯ ಸೇನೆ ಹೇಳಿಕೆ ನೀಡಿದ ನಂತರ 500 ಅಂಶಗಳಷ್ಟು ಕುಸಿದಿದೆ. 
ದಿನದ ಪ್ರಾರಂಭದಲ್ಲಿ ಬಿ ಎಸ್ ಇ ಸೂಚ್ಯಂಕ 28,423.14 ಅಂಶಗಳಿದ್ದರೆ ಮಧ್ಯಾಹ್ನ ಮೂರು ಘಂಟೆಯ ಹೊತ್ತಿಗೆ 444.60 ಅಂಕಗಳನ್ನು ಕಳೆದುಕೊಂಡು 27,848.21 ಅಂಶಗಳಾಗಿತ್ತು. 
ಎನ್ ಎಸ್ ಇ ಕೂಡ 147.65 ಅಂಶಗಳಷ್ಟು ಕುಸಿತ ಕಂಡು 1.69% ಕಡಿಮೆ ಅಂದರೆ 8597.50 ಅಂಕಕ್ಕೆ ಇಳಿದಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com