ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಶೇಕಡಾ 0.1ರಷ್ಟು ಕಡಿತ

ಕೇಂದ್ರ ಸರ್ಕಾರ 2016-17ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮೂರನೇ ತ್ರೈಮಾಸಿಕ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ 2016-17ನೇ ಸಾಲಿನ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮೂರನೇ ತ್ರೈಮಾಸಿಕ ಅವಧಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಶೇಕಡಾ 0.1ರಷ್ಟು ಕಡಿತಗೊಳಿಸಿದೆ.
ಇದರಿಂದಾಗಿ ಪಿಪಿಎಫ್, ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ ಖಾತೆಗಳ ಬಡ್ಡಿದರ ಕಡಿಮೆಯಾಗಲಿವೆ.
 ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನ ಬಡ್ಡಿದರ ಮೂರನೇ ತ್ರೈಮಾಸಿಕ ಅವಧಿಯಲ್ಲಿ ಶೇಕಡಾ 8ರಷ್ಟಿರಲಿದೆ. ಇದು ಈ ತಿಂಗಳ ಅಂತ್ಯದವರೆಗಿನ ತ್ರೈಮಾಸಿಕದಲ್ಲಿ ಶೇಕಡಾ 8.1ರಷ್ಟಿತ್ತು. ಈ ಮಧ್ಯೆ ಕಿಸಾನ್ ವಿಕಾಸ್ ಪತ್ರದ ಬಡ್ಡಿದರ ಶೇಕಡಾ 7.8ರಿಂದ ಶೇಕಡಾ 7.8ಕ್ಕಿಳಿಯಲಿದೆ ಮತ್ತು ಇದು 112 ತಿಂಗಳ ಬದಲಿಗೆ 110 ತಿಂಗಳುಗಳಲ್ಲಿ ಮೆಚ್ಯೂರ್ ಆಗಲಿದೆ.
 ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ, ಮೂರನೇ ತ್ರೈಮಾಸಿಕ ಅವಧಿಯ 5 ವರ್ಷಗಳ ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು 5 ವರ್ಷಗಳ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದ ಬಡ್ಡಿದರ ಕೂಡ ಶೇಕಡಾ 8.5ರಿಂದ ಶೇಕಡಾ 8ಕ್ಕೆ ಇಳಿಕೆಯಾಗಿದೆ.
ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿದರ ಮುಂದಿನ 3 ತಿಂಗಳು ಶೇಕಡಾ 8.6ರ ಬದಲಿಗೆ ಶೇಕಡಾ 8.5ರಷ್ಟಾಗಲಿದೆ. ಇನ್ನು 1,2,3,4 ಮತ್ತು 5 ವರ್ಷಗಳ ಅವಧಿ ಠೇವಣಿಗಳ ಬಡ್ಡಿ ಮೊತ್ತ ಕೂಡ 0.1ರಷ್ಟು ಕಡಿಮೆಯಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com