"ಬೃಹತ್ ಮೊತ್ತದ ಠೇವಣಿ: 18 ಲಕ್ಷ ಬ್ಯಾಂಕ್ ಖಾತೆಗಳ ಮೇಲೆ ನಿಗಾ"

2016ರ ನವೆಂಬರ್ 8 ರಂದು 1000, 500 ರೂ ನೋಟುಗಳ ನಿಷೇಧದ ನಂತರ ಬೃಹತ್ ಮೊತ್ತದ ಠೇವಣಿ ಹೊಂದಿದ್ದ ಸುಮಾರು 18 ಲಕ್ಷ ಬ್ಯಾಂಕ್ ಖಾತೆ ಗಳ ಮೇಲೆ ನಿಗಾ ಇಡಲಾಗಿದೆ...
"ಬೃಹತ್ ಮೊತ್ತದ ಠೇವಣಿ: 18 ಲಕ್ಷ ಬ್ಯಾಂಕ್ ಖಾತೆಗಳ ಮೇಲೆ ನಿಗಾ"
"ಬೃಹತ್ ಮೊತ್ತದ ಠೇವಣಿ: 18 ಲಕ್ಷ ಬ್ಯಾಂಕ್ ಖಾತೆಗಳ ಮೇಲೆ ನಿಗಾ"
ನವದೆಹಲಿ: 2016ರ ನವೆಂಬರ್ 8 ರಂದು 1000, 500 ರೂ ನೋಟುಗಳ ನಿಷೇಧದ ನಂತರ ಬೃಹತ್ ಮೊತ್ತದ ಠೇವಣಿ ಹೊಂದಿದ್ದ ಸುಮಾರು 18 ಲಕ್ಷ ಬ್ಯಾಂಕ್ ಖಾತೆ ಗಳ ಮೇಲೆ ನಿಗಾ ಇಡಲಾಗಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಲೋಕಸಭೆಯಲ್ಲಿ ಮಾತನಾಡಿರುವ ಅರುಣ್ ಜೇಟ್ಲಿ, ನೋಟು ನಿಷೇಧದ ನಂತರ ಬೃಹತ್ ಮೊತ್ತದ ಹಣ ಠೇವಣಿಯಾಗಿರುವ 18 ಲಕ್ಷ ಬ್ಯಾಂಕ್ ಖಾತೆಗಳಿಗೂ ಖಾತೆದಾರರ ಆದಾಯಕ್ಕೂ ತಾಳೆಯಾಗುತ್ತಿಲ್ಲ. ಇಂತಹ ಖಾತೆಗಳನ್ನು ಪತ್ತೆ ಮಾಡುವುದಕ್ಕೆ ಡೇಟಾ ಮೈನಿಂಗ್ ನ್ನು ಉಪಯೋಗಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 
ಜನ್ ಧನ್ ಖಾತೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗಿದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆಯಲು ತೀವ್ರವಾಗಿ ಡಾಟಾ ಮೈನಿಂಗ್ ಮಾಡಲಾಗುತ್ತಿದೆ. ಬೃಹತ್ ಮೊತ್ತವನ್ನು ಠೇವಣಿ ಮಾಡಿದವರ ಬೆನ್ನಟ್ಟಿದ್ದೇವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. 
18 ಲಕ್ಷ ಖಾತೆಗಳಲ್ಲಿ ಠೇವಣಿ ಆಗಿರುವ ಮೊತ್ತಕ್ಕೂ ಖಾತೆದಾರರ ಆದಾಯಕ್ಕೂ ತಾಳೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮಾಹಿತಿಯನ್ನು ಕೇಳಿದ್ದೇವೆ. ಈ ಪೈಕಿ ಕೆಲವರು ಮಾಹಿತಿ ನೀಡಿದ್ದಾರೆ. ಮಾಹಿತಿ ನೀಡದವರಿಗೆ ನೋಟಿಸ್ ನೀಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com