ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್: ಸಮ್ಮರ್ ಸರ್ ಪ್ರೈಸ್ ಆಫರ್ ಗೆ ಖೋತಾ

ಜಿಯೋ ಗ್ರಾಹಕರಿದೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಸಮ್ಮರ್ ಸರ್ ಪ್ರೈಸ್ ಆಫರ್‍ನಲ್ಲಿ ಉಚಿತ ಡೇಟಾವನ್ನು ಪಡೆಯುತ್ತಿದ್ದವರು ಇನ್ನು ಮುಂದೆ ಜಿಯೋ ಸೇವೆ ...
ಜಿಯೋ
ಜಿಯೋ
ನವದೆಹಲಿ: ಜಿಯೋ ಗ್ರಾಹಕರಿದೆ ಇಲ್ಲೊಂದು ಶಾಕಿಂಗ್ ನ್ಯೂಸ್ ಇದೆ. ಸಮ್ಮರ್ ಸರ್ ಪ್ರೈಸ್ ಆಫರ್‍ನಲ್ಲಿ ಉಚಿತ ಡೇಟಾವನ್ನು ಪಡೆಯುತ್ತಿದ್ದವರು ಇನ್ನು ಮುಂದೆ ಜಿಯೋ ಸೇವೆ ಬಳಸಬೇಕಾದರೆ ಹಣವನ್ನು ಪಾವತಿ ಮಾಡಲೇಬೇಕು.
ಸಮ್ಮರ್ ಸರ್‍ಪ್ರೈಸ್ ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಆಫರ್ ನೀಡುತ್ತಿದ್ದ ಜಿಯೋ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಸಲಹೆಯ ಹಿನ್ನೆಲೆಯಲ್ಲಿ ಈ ಆಫರ್ ಹಿಂಪಡೆದಿದೆ. 
ಟ್ರಾಯ್ ಸಲಹೆಯ ಮೇರೆಗೆ ನಾವು 3 ತಿಂಗಳ ಸಮ್ಮರ್ ಸರ್‍ಪ್ರೈಸ್ ಆಫರ್ ಹಿಂದಕ್ಕೆ ಪಡೆಯುತ್ತಿದ್ದೇವೆ. ಟ್ರಾಯ್ ಸಲಹೆಗೆ ನಾವು ಬದ್ಧರಾಗಿದ್ದೇವೆ. ಆದರೆ ಯಾರೆಲ್ಲ ಸಮ್ಮರ್ ಸರ್ ಪ್ರೈಸ್ ಆಫರ್ ರಿಚಾರ್ಜ್ ಮಾಡಿದ್ದಾರೋ ಅವರು ಸದ್ಯಕ್ಕೆ ಈ ಆಫರ್‍ನಲ್ಲೇ ಮುಂದುವರೆಯಲಿದ್ದಾರೆ ಪ್ರಕಟಣೆಯಲ್ಲಿ ತಿಳಿಸಿದೆ.
ಮಾರ್ಚ್ 31ರಂದು ಜಿಯೋ ಸಮ್ಮರ್ ಆಫರ್ ಘೋಷಿಸಿದ್ದ ಜಿಯೋ ಸಂಸ್ಥೆ, ತನ್ನಲ್ಲಿ ಪ್ರೈಮ್ ಸದಸ್ಯತ್ವ ಪಡೆದ ತನ್ನ ಗ್ರಾಹಕರು 303 ರು. ಗಳಿಗೆ ರೀಚಾರ್ಜ್ ಮಾಡಿಸಿದರೆ ಸಾಕು ಅವರು ಮೂರು ತಿಂಗಳ ಕಾಲ ಉಚಿತವಾಗಿ ಕರೆ ಹಾಗೂ ಡೇಟಾ ಸೌಕರ್ಯ ಪಡೆಯಬಹುದಾಗಿತ್ತು.

ಆದರೆ, ಈ ಸೌಲಭ್ಯವನ್ನು ಜಿಯೋ ಹಿಂಪಡೆದಿದ್ದು, 303 ಹಾಗೂ ಅದಕ್ಕಿಂತ ಹೆಚ್ಚು ರು.ಗಳ ರೀಚಾರ್ಜ್ ಮಾಡಿಸುವವರು, ಇತರ ನೆಟ್ ವರ್ಕ್ ಗಳಂತೆ ಕೇವಲ 30 ದಿನಗಳಿಗೆ ಮಾತ್ರ ಜಿಯೋ ಸೌಲಭ್ಯ ಪಡೆಯಲಿದ್ದಾರೆ.  ಆದರೆ, ಪ್ರೈಮ್ ಸದಸ್ಯತ್ವ ಪಡೆದು 303 ಹಾಗೂ ಅದಕ್ಕಿಂತ ಮೇಲ್ಪಟ್ಟ ದರಗಳಲ್ಲಿ ರೀಚಾರ್ಜ್ ಮಾಡಿಸಿ ಸಮ್ಮರ್ ಆಫರ್ ನಲ್ಲಿ ನೋಂದಾಯಿಸಿಕೊಂಡಿದ್ದ ಗ್ರಾಹಕರಿಗೆ ಈ ಮೊದಲು ಘೋಷಿಸಿದ್ದಂತೆ 3 ತಿಂಗಳ ಉಚಿತ ಡೇಟಾ, ಕರೆ ಆಫರ್ ಮುಂದುವರಿಯಲಿದೆ.

ಜಿಯೋ ಸಮ್ಮರ್ ಆಫರ್ ನಿಮಗೆ ಬೇಕಾದ್ರೆ ಮೊದಲು ನೀವು ಜಿಯೋದ ಯಾವ ಗ್ರಾಹಕರ ವಿಭಾಗದಲ್ಲಿ ಇದ್ದೀರಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಜಿಯೋದಲ್ಲಿ ಸದ್ಯಕ್ಕೆ ಎರಡು ವರ್ಗದ ಗ್ರಾಹಕರಿದ್ದಾರೆ. ಒಂದನೇಯ ಗ್ರಾಹಕರು 99 ರೂ. ನೀಡಿ ಪ್ರೈಮ್ ಸದಸ್ಯರಾದವರು. 99 ರೂ. ನೀಡದೇ ಈಗಲೂ ಜಿಯೋ ಸೇವೆಯನ್ನು ಬಳಸುತ್ತಿರುವವರು ಎರಡನೇ ವರ್ಗದ ಗ್ರಾಹಕರು. ಹೀಗಾಗಿ ಜಿಯೋ ಸಮ್ಮರ್ ಆಫರ್ ಲಾಭ ನಿಮಗೆ ಬೇಕಿದ್ದಲ್ಲಿ ಮೊದಲು ನೀವು 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com