ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ತೆರಿಗೆ ವಂಚಕರನ್ನು ಹಿಡಿಯಲು ತಂತ್ರಜ್ಞಾನದ ಸಮಗ್ರ ಬಳಕೆಗೆ ತೆರಿಗೆ ಇಲಾಖೆ ನಿರ್ಧಾರ

ಅತ್ಯಾಧುನಿಕ ಸಾಫ್ಟ್ ವೇರ್ ನೊಂದಿಗೆ ತನ್ನ ಮಾಹಿತ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸಲು ತೆರಿಗೆ...
Published on
ನವದೆಹಲಿ: ಅತ್ಯಾಧುನಿಕ ಸಾಫ್ಟ್ ವೇರ್ ನೊಂದಿಗೆ ತನ್ನ ಮಾಹಿತ ತಂತ್ರಜ್ಞಾನ ವ್ಯವಸ್ಥೆಯನ್ನು ಬಲಪಡಿಸಲು ತೆರಿಗೆ ಇಲಾಖೆ ಅಧಿಕಾರಿಗಳು ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ಈ ಅತ್ಯಾಧುನಿಕ ತಂತ್ರಜ್ಞಾನ ವ್ಯಕ್ತಿಗಳ ಹಣದ ವಹಿವಾಟುಗಳನ್ನು ಕ್ಷಿಪ್ರಗತಿಯಲ್ಲಿ ವಿಶ್ಲೇಷಿಸುತ್ತದೆ. ತೆರಿಗೆ ಇಲಾಖೆ ಅನುಮಾನಾಸ್ಪದ ಖಾತೆಗಳನ್ನು ಪರೀಕ್ಷಿಸಲು ಸಹಾಯಕರನ್ನು ನೇಮಕ ಮಾಡುವ ಯೋಜನೆಯಲ್ಲಿದೆ.
ನೋಟುಗಳ ಅಮಾನ್ಯತೆ ನಂತರ ಕಪ್ಪು ಹಣದ ವಹಿವಾಟುಗಳನ್ನು ಪತ್ತೆಹಚ್ಚಲು ಕೇಂದ್ರ ನೇರ ತೆರಿಗೆ ತಂಡವೊಂದನ್ನು ರಚಿಸಲು ಯೋಜಿಸಿದ್ದು ಈ ತಂಡ ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳ ಮತ್ತು ವಿಶೇಷ ಕಾರ್ಯಪಡೆಯ  ಅಧಿಕಾರಿಗಳಿಗೆ ಸಹಕಾರ ನಿಜ ಅವಧಿಯ ಆಧಾರದ ಮೇಲೆ ಸಹಕಾರ ನೀಡಲಿದೆ.
ಕಾಲಕಾಲಕ್ಕೆ ತೆರಿಗೆ ಕಟ್ಟುವ ತೆರಿಗೆದಾರರಿಗೆ ಯಾವುದೇ ತೊಂದರೆ ನೀಡುವುದು ತೆರಿಗೆ ಇಲಾಖೆಯ ಉದ್ದೇಶವಲ್ಲ. ಆದರೆ ಕಪ್ಪು ಹಣ ಸಂಗ್ರಹಿಸಿರುವವರು ಇಲ್ಲಿ ನೇರವಾಗಿ ಜವಾಬ್ದಾರರಾಗಿರುತ್ತಾರೆ. ತಂತ್ರಜ್ಞಾನವನ್ನು ವ್ಯಾಪಕ ಬಳಕೆ ಮಾಡಲಾಗುತ್ತಿದ್ದು, ಇದು ಸಮಯ ಉಳಿತಾಯ ಮಾಡುವುದಲ್ಲದೆ ಗುರಿಯ ಕಡೆಗೆ ಕೇಂದ್ರೀಕರಿಸುತ್ತದೆ. ಕೆಲವು ಕ್ರಮಗಳು ಈಗಾಗಲೇ ತಿಳಿದಿದ್ದು, ಇನ್ನು ಕೆಲವು ಪ್ರಯೋಗದ ಹಂತಗಳಲ್ಲಿದೆ ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ನೋಟುಗಳ ಅಮಾನ್ಯತೆ ನಂತರ ಜನರು ಕಪ್ಪು ಹಣವನ್ನು ತಡೆಹಿಡಿಯಲು ಅನುಸರಿಸುವ ಹಲವು ಉಪಾಯಗಳ ಬಗ್ಗೆ ತೆರಿಗೆ ಇಲಾಖೆಗೆ ಅರಿವಿದೆ. ಕಪ್ಪು ಹಣ ಹೊಂದಿರುವವರು ಕಂಡುಕೊಂಡಿರುವ ಒಂದು ಉಪಾಯ ವಹಿವಾಟಿನ ಹಲವು ಪುಸ್ತಕಗಳನ್ನು ಸೃಷ್ಟಿಸುವುದು. ಈ ಪುಸ್ತಕಗಳು ಹಲವು ಸಾಫ್ಟ್ ವೇರ್ ಗಳಲ್ಲಿ ಸೇರ್ಪಡೆಯಾಗಿರುತ್ತವೆ. ಇನ್ನು ಕೆಲವರು ವಿದೇಶಗಳಲ್ಲಿ ಕೂಡ ವಹಿವಾಟು ನಡೆಸಿದ್ದಾರೆ.
ಕೇಂದ್ರ ನೇರ ತೆರಿಗೆ ಅಧಿಕಾರಿಗಳಿಗೆ ನಿಗದಿತ ತರಬೇತಿ ಹೊರತಾಗಿ ವಿಶೇಷ ಮಾಹಿತಿ ತಂತ್ರಜ್ಞಾನ ತರಬೇತಿಯನ್ನು ಆರಂಭಿಸಿದೆ. ಇದು ವಿಶೇಷ ಕೇಸುಗಳನ್ನು ಕೌಶಲ್ಯ ಅಧಿಕಾರಿಗಳು ಎದುರಿಸಲು ಅಂಕಿಅಂಶ ವಿಶ್ಲೇಷಣೆಗಳಿಗೆ ಆಗಿದೆ.
ಕೇಂದ್ರ ನೇರ ತೆರಿಗೆ ಹೊರಡಿಸಿರುವ ಹೇಳಿಕೆ ಪ್ರಕಾರ,  ಕಳೆದ ಜನವರಿ 31ರಂದು ಆರಂಭಗೊಂಡ ಆಪರೇಶನ್ ಕ್ಲೀನ್ ಮನಿಯಲ್ಲಿ ತಂತ್ರಜ್ಞಾನವನ್ನು ನಗದು ಠೇವಣಿಯ ಇ-ಪರಿಶೀಲನೆಗೆ ನವೆಂಬರ್ 9ರಿಂದ ಡಿಸೆಂಬರ್ 30ರವರೆಗೆ ಬಳಸಿಕೊಳ್ಳಲಾಗಿತ್ತು.
ಸಂಶಯಾಸ್ಪದ ಮತ್ತು ತೆರಿಗೆ ಕಟ್ಟದಿರುವ ಖಾತೆಗಳನ್ನು ಪರಿಶೀಲನೆ ನಡೆಸಲು ಇನ್ನು ಒಂದು ವರ್ಷಗಳ ಸಮಯ ಬೇಕಾಗಬಹುದು. ಆದರೆ ತಂತ್ರಜ್ಞಾನದ ನೆರವು ಮತ್ತು ಖಾತೆಗಳಿಗೆ ನಿರಂತರ ಜಾರಿ ಕ್ರಿಯೆಯನ್ನು ತರಲಾಗಿದೆ ಎಂದು ಕೇಂದ್ರ ನೇರ ತೆರಿಗೆಯ ಅಧಿಕೃತ ವಕ್ತಾರೆ ಮೀನಾಕ್ಷಿ ಜೆ ಗೋಸ್ವಾಮಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com