39 ಸಾವಿರ ಕೋಟಿ ರು. ಬೆಲೆಯ ಸಹಾರಾ ಆ್ಯಂಬಿ ವ್ಯಾಲಿ ಹರಾಜಿಗೆ ಸುಪ್ರೀಂ ಕೋರ್ಟ್ ಆದೇಶ

ಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್‌ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಕಂಪನಿಗೆ ಸೇರಿದ 39 ಸಾವಿರ ಕೋಟಿ ....
ಸುಬ್ರತಾ ರಾಯ್‌
ಸುಬ್ರತಾ ರಾಯ್‌
ನವದೆಹಲಿ: ಸಾಲ ಮರುಪಾವತಿ ಪ್ರಕರಣದಲ್ಲಿ ಸಹಾರಾ ಮುಖ್ಯಸ್ಥ ಸುಬ್ರತಾ ರಾಯ್‌ ಅವರಿಗೆ ಭಾರಿ ಹಿನ್ನಡೆಯಾಗಿದ್ದು, ಕಂಪನಿಗೆ ಸೇರಿದ 39 ಸಾವಿರ ಕೋಟಿ ರುಪಾಯಿ ಮೌಲ್ಯದ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಹರಾಜು ಹಾಕುವಂತೆ ಸೋಮವಾರ ಆದೇಶಿಸಿದೆ. ಅಲ್ಲದೆ ಈ ಸಂಬಂಧ ಬಾಂಬೆ ಹೈಕೋರ್ಟ್ ನ ಅಧಿಕಾರಿಯೊಬ್ಬರನ್ನು ನೇಮಕ ಮಾಡಿದೆ.
ಈ ಹಿಂದೆ ಮಹಾರಾಷ್ಟ್ರದ ಪುಣೆಯ ಲೊನಾವಾಲಾ ಬಳಿ ಇರುವ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಸ್ವಾಧೀನಕ್ಕೆ ಆದೇಶಿಸಿದ್ದ ಸುಪ್ರೀಂ ಕೋರ್ಟ್ ಇಂದು ಅದನ್ನು ಹರಾಜು ಹಾಕುವಂತೆ ಆದೇಶಿಸಿದೆ. ಈ ಸಂಬಂಧ ಏಪ್ರಿಲ್ 28ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸುಬ್ರತಾ ರಾಯ್ ಅವರಿಗೆ ಕೋರ್ಟ್ ಸೂಚಿಸಿದೆ.
ಕಳೆದ ಫೆಬ್ರವರಿಯಲ್ಲಿ ಸಹಾರಾ ಸಂಸ್ಧೆಯ ಆ್ಯಂಬಿ ವ್ಯಾಲಿ ಪ್ರಾಪರ್ಟಿ ಅನ್ನು ಮೇಲ್ವಿಚಾರಣೆ ಅಡಿಯಲ್ಲಿ ಇಟ್ಟಿದ್ದ ಕೋರ್ಟ್, ಯಾವುದೇ ವ್ಯವಹಾರಗಳನ್ನು ನಡೆಸದಂತೆ ಸಹಾರಾ ಗ್ರೂಪ್ ಗೆ ಸೂಚಿಸಿತ್ತು. ಇದರಿಂದ ಮುಂದೆ ಪ್ರಾಪರ್ಟಿಯನ್ನು ಸಾರ್ವಜನಿಕವಾಗಿ ಹರಾಜು ಹಾಕಲು ಸುಲಭವಾಗುತ್ತದೆ ಎಂದು ಸಹಾರಾ ಗ್ರೂಪ್ ಗೆ ಸುಪ್ರೀಂ ಕೋರ್ಟ್ ಹೇಳಿತ್ತು.
ಸಹಾರಾ ಸಂಸ್ಥೆಯು ಸೆಬಿಗೆ ನೀಡಬೇಕಿದ್ದ 14 ಸಾವಿರ ಕೋಟಿ ರು. ಠೇವಣಿ ಹಣದಲ್ಲಿ ಈಗಾಗಲೇ 11 ಸಾವಿರ ಕೋಟಿ ರು. ನೀಡಿದ್ದು, ಉಳಿದಂತೆ 3 ಸಾವಿರ ಕೋಟಿ ರು. ಪಾವತಿ ಬಗ್ಗೆ ಪ್ರಕರಣ ಕೋರ್ಟ್‌ ಮೆಟ್ಟಿಲೇರಿತ್ತು. ಒಂದು ವೇಳೆ ಸಾಲ ಮರುಪಾವತಿ ಆಗದಿದ್ದರೆ ಗಣ್ಯ ಉದ್ಯಮಿಗಳು ವಾಸವಿರುವ ಆ್ಯಂಬಿ ವ್ಯಾಲಿ ಪ್ರಾಪರ್ಟಿಯನ್ನು ಸಾರ್ವಜನಿಕವಾಗಿ ಹರಾಜಿಗಿಡಲಾಗುವುದು ಎಂದು ಕೋರ್ಟ್‌ ಎಚ್ಚರಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com