ವಿಶ್ವದ ಪ್ರತಿಭಾವಂತರು ಇಲ್ಲದಿದ್ದರೆ ಆಪಲ್, ಸಿಸ್ಕೊ, ಐಬಿಎಂಗಳು ಎಲ್ಲಿರುತ್ತಿದ್ದವು: ಊರ್ಜಿತ್ ಪಟೇಲ್ ಪ್ರಶ್ನೆ

ವಿಶ್ವದ ಪ್ರತಿಭಾವಂತರು ಮತ್ತು ಉತ್ತಮ ಉತ್ಪನ್ನಗಳು ಇಲ್ಲದಿದ್ದರೆ ಅಮೆರಿಕಾದ ಕಂಪೆನಿಗಳಾದ...
ಊರ್ಜಿತ್ ಪಟೇಲ್
ಊರ್ಜಿತ್ ಪಟೇಲ್
Updated on
ನ್ಯೂಯಾರ್ಕ್: ವಿಶ್ವದ ಪ್ರತಿಭಾವಂತರು ಮತ್ತು ಉತ್ತಮ ಉತ್ಪನ್ನಗಳು ಇಲ್ಲದಿದ್ದರೆ ಅಮೆರಿಕಾದ ಕಂಪೆನಿಗಳಾದ ಆಪಲ್, ಸಿಸ್ಕೊ, ಐಬಿಎಂ ಮೊದಲಾದ ಕಂಪೆನಿಗಳು ಎಲ್ಲಿರುತ್ತಿದ್ದವು ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಕೇಳಿದ್ದಾರೆ. 
ಈ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಕ್ಷಣಾ ನೀತಿ( protectionism)ನ್ನು ಟೀಕಿಸಿದ್ದಾರೆ.
ವಿಶ್ವದ ರಾಷ್ಟ್ರಗಳು ಇದುವರೆದೆ ಮುಕ್ತ ವ್ಯಾಪಾರ ವ್ಯವಸ್ಥೆಯಿಂದ ಲಾಭ ಪಡೆದುಕೊಂಡಿವೆ. ವಿಶ್ವದ ಪ್ರಮುಖ ಆರ್ಥಿಕ ರಾಷ್ಟ್ರಗಳಲ್ಲಿ ರಕ್ಷಣಾ ನೀತಿಯ ಪ್ರವೃತ್ತಿ ಹೆಚ್ಚಾಗುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದರು. ನ್ಯೂಯಾರ್ಕ್ ನ ಕೊಲಂಬಿಯಾ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಇಂಟರ್ ನ್ಯಾಶನಲ್ ಅಂಡ್ ಪಬ್ಲಿಕ್ ಅಫೈರ್ಸ್ ನ ಭಾರತೀಯ ಆರ್ಥಿಕ ಯೋಜನೆಗಳ ಕುರಿತು ಅವರು 3ನೇ ಕೊಟಾಕ್ ಫ್ಯಾಮಿಲಿ ಡಿಸ್ಟಿಂಗ್ಯುಶ್ ಡ್ ಉಪನ್ಯಾಸ ನೀಡುತ್ತಿದ್ದ ವೇಳೆ ಈ ಬಗ್ಗೆ ಪ್ರಸ್ತಾಪಿಸಿದರು. 
ಜಾಗತಿಕ ಪೂರೈಕೆ ಕೊಂಡಿಯಿಂದಾಗಿ ಅಮೆರಿಕ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳ ಅಂತಾರಾಷ್ಟ್ರೀಯ ಕಂಪೆನಿಗಳ  ಷೇರು ಬೆಲೆಗಳು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತವೆ.ವಿಶ್ವದ ಹಲವು ಕಡೆಗಳಿಂದ ಪ್ರತಿಭಾವಂತರು ಮತ್ತು ಉತ್ತಮ ಉತ್ಪಾದನೆಗಳು ಪೂರೈಕೆಯಾಗದಿದ್ದರೆ ದೊಡ್ಡ ದೊಡ್ಡ ಹೆಸರು ಗಳಿಸಿದ ಬಹುರಾಷ್ಟ್ರೀಯ ಕಂಪೆನಿಗಳು ಅಸ್ಥಿತ್ವ ಉಳಿಸಿಕೊಳ್ಳಲು ಹೇಗೆ ಸಾಧ್ಯವಾದೀತು. ರಕ್ಷಣಾ ನೀತಿಗೆ ವ್ಯಾಪಾರ ಉಪಕರಣವನ್ನು ಬಳಸಿದರೆ ಅದು ರಾಷ್ಟ್ರವನ್ನು ಬೆಳವಣಿಗೆಯಿಂದ ಭಿನ್ನವಾದ ಪಥದಲ್ಲಿ ಕೊಂಡೊಯ್ಯುತ್ತದೆ ಎಂದರು.
ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ ಕೆಲವು ಬ್ಯಾಂಕುಗಳನ್ನು ಮಾತ್ರ ಉಳಿಸಿಕೊಂಡರೆ ಕಾರ್ಯನಿರ್ವಹಣೆ ದೃಷ್ಟಿಯಿಂದ ಮತ್ತು ಅನುತ್ಪಾದಕ ಆಸ್ತಿಗಳ ಸಮಸ್ಯೆಗಳನ್ನು ಬಗೆಹರಿಸಲು ಉತ್ತಮ ಎಂದು ಹೇಳಿದರು.
ಇಷ್ಟೊಂದು ಸಾರ್ವಜನಿಕ ವಲಯದ ಬ್ಯಾಂಕುಗಳು ನಮಗೆ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. ಈ ಎಲ್ಲಾ ಬ್ಯಾಂಕುಗಳನ್ನು ವಿಲೀನ ಮಾಡಿ ಕೆಲವನ್ನು ಮಾತ್ರ ಇಟ್ಟುಕೊಳ್ಳುವುದು ಒಳ್ಳೆಯದು ಎಂದು ಅಭಿಪ್ರಾಯಪಟ್ಟರು.
ಅನುತ್ಪಾದಕ ಆಸ್ತಿಗಳ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಹೆಚ್ಚು ದಕ್ಷತೆಯಿಂದ ಕಾರ್ಯನಿರ್ವಹಿಸಲು ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸುವುದು ಉತ್ತಮ, ಈ ದಿಸೆಯಲ್ಲಿ ಈಗಾಗಲೇ ಪ್ರವೃತ್ತಿ ಆರಂಭವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ದುರ್ಬಲ ಬ್ಯಾಂಕುಗಳು ಮಾರುಕಟ್ಟೆ ಷೇರುಗಳನ್ನು ಕಳೆದುಕೊಳ್ಳುತ್ತಿರುವುದು ಉತ್ತಮ ಸಂಗತಿ. ಶಕ್ತಿಶಾಲಿ ಬ್ಯಾಂಕುಗಳಿಗೆ ಹೆಚ್ಚು ಷೇರುಗಳು ಬರುತ್ತವೆ. ಮುಖ್ಯವಾಗಿ ಖಾಸಗಿ ವಲಯದ ಬ್ಯಾಂಕುಗಳು, ಅದು ಕೂಡ ಉತ್ತಮವೇ, ಬ್ಯಾಂಕುಗಳ ವಿಲೀನದಿಂದ ಬ್ಯಾಂಕ್ ಶಾಖೆಗಳು ಮತ್ತು ಕಾರ್ಯಾಚರಣೆಗಳ ಏಕೀಕರಣದ ಮೂಲಕ ಉಳಿತಾಯ, ಮಾಡಬಹುದು. ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಜಾರಿಗೆ ಬರಬೇಕು ಎಂದು ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com