ನೋಟ್ ಬ್ಯಾನ್ ಎಫೆಕ್ಟ್: 2016-17ರಲ್ಲಿ ಐಟಿ ರಿಟರ್ನ್ಸ್ ಸಲ್ಲಿಕೆ ಶೇ.25ರಷ್ಟು ಹೆಚ್ಚಳ

ಗರಿಷ್ಠ ಮೌಲ್ಯದ ನೋಟ್ ನಿಷೇಧದ ನಂತರ 2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಕೆಯಲ್ಲಿ ಶೇ.25ರಷ್ಟು ಹೆಚ್ಚವಾಗಿದ್ದು,....
ಬೆಂಗಳೂರಿನಲ್ಲಿ ವಿಶೇಷ ಮೇಳ
ಬೆಂಗಳೂರಿನಲ್ಲಿ ವಿಶೇಷ ಮೇಳ
ನವದೆಹಲಿ: ಗರಿಷ್ಠ ಮೌಲ್ಯದ ನೋಟ್ ನಿಷೇಧದ ನಂತರ 2016-17ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್‌(ಐಟಿಆರ್‌) ಸಲ್ಲಿಕೆಯಲ್ಲಿ ಶೇ.25ರಷ್ಟು ಹೆಚ್ಚವಾಗಿದ್ದು, ಒಟ್ಟು 2.82 ಕೋಟಿ ಜನ ರಿಟನ್ಸ್ ಫೈಲ್ ಮಾಡಿದ್ದಾರೆ ಎಂದು ಸೋಮವಾರ ಆದಾಯ ತೆರಿಗೆ ಇಲಾಖೆ ಹೇಳಿದೆ.
ಐಟಿ ರಿಟರ್ನ್ಸ್ ಸಲ್ಲಿಸಲು ಕಡೆಯ ದಿನವಾದ ಆಗಸ್ಟ್ 5ರವರೆಗೆ ಶೇ25.3ರಷ್ಟು ವೈಯಕ್ತಿಕವಾಗಿ ಒಟ್ಟು 2.79 ಕೋಟಿ ಜನ ತಮ್ಮ ಐಟಿಆರ್ ಫೈಲ್ ಮಾಡಿದ್ದಾರೆ. ಕಳೆದ ವರ್ಷ 2.22ಕೋಟಿ ಜನ ಐಟಿಆರ್ ಫೈಲ್ ಮಾಡಿದ್ದರು. 
ನೋಟ್ ನಿಷೇಧ ಹಾಗೂ ಕಪ್ಪು ಹಣದ ವಿರುದ್ಧದ ಕಾರ್ಯಾಚರಣೆಯ ಪರಿಣಾಮವಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ಇಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಗಸ್ಟ್ 5ರವರೆಗೆ ಒಟ್ಟಾರೆ 2.82 ಕೋಟಿ ಐಟಿಆರ್ ಸಲ್ಲಿಕೆಯಾಗಿದ್ದು, ಕಳೆದ ವರ್ಷ 2.26 ಕೋಟಿ ಸಲ್ಲಿಕೆಯಾಗಿತ್ತು. ಕಳೆದ ವರ್ಷದ ಬೆಳವಣಿಗೆ ದರ ಶೇ.9.9ಕ್ಕೆ ಹೋಲಿಸಿದರೆ ಈ ವರ್ಷ ಶೇ.24.7ರಷ್ಟು ಹೆಚ್ಚಳವಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ.
ಇನ್ನು ಮಂಗಡ ತೆರಿಗೆ ಪಾವತಿ ಸಲ್ಲಿಸುವವರ ಸಂಖ್ಯೆಯೂ ಈ ಬಾರಿ ಹೆಚ್ಚಳವಾಗಿದ್ದು, ಕಳೆದ ಸಾಲಿಗೆ ಹೋಲಿಸಿದರೆ ಈ ಪ್ರಮಾಣ ಶೇ.41.79ರಷ್ಟು ಹೆಚ್ಚಳವಾಗಿದೆ. ಒಟ್ಟಿನಲ್ಲಿ ನೋಟು ಅಮಾನ್ಯೀಕರಣದ ನಂತರ ತೆರಿಗೆ ಸಲ್ಲಿಸಿದವರ ಪ್ರಮಾಣ ಹೆಚ್ಚಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಮುಂಚೆ ರಿಟರ್ನ್ಸ್‌ ಫೈಲ್ ಮಾಡಲು ಜುಲೈ 31 ಕೊನೆಯ ದಿನವಾಗಿತ್ತು. ಆದರೆ ಕೇಂದ್ರ ಸರ್ಕಾರ ಇದನ್ನು ಆಗಸ್ಟ್ 5ರ ವರೆಗೆ ವಿಸ್ತರಿಸಿತ್ತು. ಅಲ್ಲದೆ, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ವೇತನದಾರರು ಮತ್ತು ಪಿಂಚಣಿದಾರರಿಗೆ ರಿರ್ಟನ್ಸ್‌ ಸಲ್ಲಿಕೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆ ಬೆಂಗಳೂರಿನ ಅರಮನೆ ಮೈದಾನದ ಗಾಯಿತ್ರಿ ವಿಹಾರದಲ್ಲಿ ಜು.29ರಿಂದ 31ರವರೆಗೆ ಮೂರು ದಿನಗಳ ವಿಶೇಷ ಮೇಳ ಆಯೋಜಿಸಿತ್ತು. ರಿಟರ್ನ್ಸ್ ಸಲ್ಲಿಕೆಗಾಗಿ ಇಲ್ಲಿ 54 ವಿಶೇಷ ಕೌಂಟರ್‌ಗಳನ್ನು ತೆರೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com