ಎಸ್ ಯುವಿ, ಐಷಾರಾಮಿ ಕಾರುಗಳ ಮೇಲೆ ಶೇ.25ರಷ್ಟು ತೆರಿಗೆ ಹೆಚ್ಚಳಕ್ಕೆ ಜಿಎಸ್ ಟಿ ಮಂಡಳಿ ಒಪ್ಪಿಗೆ

ಜುಲೈ 1ರಂದು ಜಿಎಸ್ ಟಿ ಜಾರಿಯಾದ ನಂತರ ಎಸ್ ಯುವಿ, ಮಧ್ಯಮ ಗಾತ್ರದ, ದೊಡ್ಡ ಹಾಗೂ ಐಷಾರಾಮಿ ಕಾರುಗಳ ಬೆಲೆ ಸ್ವಲ್ಪ ಮಟ್ಟಿಗೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಜುಲೈ 1ರಂದು ಜಿಎಸ್ ಟಿ ಜಾರಿಯಾದ ನಂತರ ಎಸ್ ಯುವಿ, ಮಧ್ಯಮ ಗಾತ್ರದ, ದೊಡ್ಡ ಹಾಗೂ ಐಷಾರಾಮಿ ಕಾರುಗಳ ಬೆಲೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿತ್ತು. ಆದರೆ ಈಗ ಜಿಎಸ್ ಟಿ ಕೌನ್ಸಿಲ್ ಸಭೆಯಲ್ಲಿ ಈ ಕಾರುಗಳ ಮೇಲೆ ಶೇ.15ರಷ್ಟು ಇದ್ದು ಸೆಸ್ ಅನ್ನು ಶೇ.25ಕ್ಕೆ ಹೆಚ್ಚಿಸಲು ಒಪ್ಪಿಗೆ ನೀಡಿದ್ದು, ಈ ಮೂಲಕ ಐಷಾರಾಮಿ ಕಾರು ಪ್ರಿಯರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.
ನೂತನ ಜಿಎಸ್ ಟಿ ನಿಯಮದ ಪ್ರಕಾರ, ಐಷಾರಾಮಿ ಕಾರುಗಳ ಮೇಲೆ ಗರಿಷ್ಠ ಶೇ,28ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಈ ಮೂಲಕ ಜಿಎಸ್ ಟಿ ಅನುಷ್ಠಾನದಿಂದ ರಾಜ್ಯಗಳಿಗೆ ಆಗುತ್ತಿದ್ದ ನಷ್ಟವನ್ನು ಸರಿದೂಗಿಸಲು ಶೇ. 1-15ರಷ್ಟು ಸೆಸ್ ವಿಧಿಸಲಾಗುತ್ತಿದೆ.
ಜಿಎಸ್ ಟಿಯನ್ನು ಪರಿಚಯಿಸಿದ ನಂತರ ಮೋಟಾರ್ ವಾಹನಗಳ (ಜಿಎಸ್ಟಿ ಪ್ಲಸ್ ಕಾಂಪೆನ್ಸೇಶನ್ ಸೆಸ್) ಮೇಲಿನ ಒಟ್ಟು ತೆರಿಗೆಯು ಜಿಎಸ್ಟಿ ಪೂರ್ವದಲ್ಲಿದ್ದ ಒಟ್ಟು ಮೊತ್ತಕ್ಕೆ ಹೆಚ್ಚಿಸಲಾಗಿದೆ ಎಂದು ಎಂದು ಹಣಕಾಸು ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ. 
ಕಳೆದ ಆಗಸ್ಟ್ 5ರಂದು ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಮಧ್ಯಮ, ಎಸ್ ಯುವಿ. ಮಧ್ಯಮ ಹಾಗೂ ದೊಡ್ಡ ಗಾತ್ರದ 1500 ಸಿಸಿಗಿಂತ ಮೇಲ್ಪಟ್ಟ ಐಷಾರಾಮಿ ಕಾರುಗಳ ಮೇಲೆ ಶೇ.25ರಷ್ಟು ಸೆಸ್ ವಿಧಿಸಲು ಒಪ್ಪಿಗೆ ಸೂಚಿಸಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com