ಜಿಎಸ್ ಟಿ ಜಾರಿ ನಂತರ ಮೊದಲ ರಿಟರ್ನ್ಸ್ ಸಲ್ಲಿಸಲು ಸಿದ್ಧರಾಗಿ: ಜಿಎಸ್ ಟಿ ಮುಖ್ಯಸ್ಥ

ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಅನುಷ್ಠಾನಗೊಳಿಸಿದ ನಂತರ ಲಕ್ಷಾಂತರ ಕಂಪನಿಗಳು ಇನ್ನು ತಮ್ಮ ಮೊದಲ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಅನುಷ್ಠಾನಗೊಳಿಸಿದ ನಂತರ ಲಕ್ಷಾಂತರ ಕಂಪನಿಗಳು ಇನ್ನು ತಮ್ಮ ಮೊದಲ ರಿಟರ್ನ್ಸ್ ಸಲ್ಲಿಸಲು ಸಿದ್ಧವಾಗಿಲ್ಲ. ಆದರೆ ಇದಕ್ಕೆ ಆಗಸ್ಟ್ 20 ಕೊನೆಯ ದಿನವಾಗಿದ್ದು, ಕೊನೆ ಗಳಿಗೆಯವರೆಗೂ ಕಾಯುವ ಬದಲು ಈಗಲೇ ರಿಟರ್ನ್ಸ್ ಸಲ್ಲಿಸಲು ಸಿದ್ಧರಾಗಿ ಎಂದು ಹಿರಿಯ ಅಧಿಕಾರಿಗಳು ಕಂಪನಿಗಳಿಗೆ ಸಲಹೆ ನೀಡಿದ್ದಾರೆ.
ಕೇವಲ 34 ಸೇವಾ ಪೂರೈಕೆದಾರರಿಗೆ ಮಾತ್ರ ಆನ್ ಲೈನ್ ಮೂಲಕ ಕಂಪನಿಗಳ ಬೃಹತ್-ಫೈಲ್ ಇನ್ವಾಯ್ಸ್ ಗಳನ್ನು ಸ್ವೀಕರಿಸಲು ಅವಕಾಶ ನೀಡಲಾಗಿದೆ ಎಂದು ಜಿಎಸ್ ಟಿ ನೆಟ್ವರ್ಕ್ ಅಧ್ಯಕ್ಷ ನವೀನ್ ಕುಮಾರ್ ಅವರು ಹೇಳಿದ್ದಾರೆ.
ದೊಡ್ಡ ಪ್ರಮಾಣದ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಅನುಕೂಲವಾಗುವಂತೆ ಮತ್ತು ತಿಂಗಳಿಗೆ ಸುಮಾರು 3 ಬಿಲಿಯನ್ ವರೆಗೆ ಇನ್ವಾಯ್ಸ್ ಗಳನ್ನು ಸ್ವೀಕರಿಸಲು ವೆಬ್ ಸೈಟ್ ಡಿಸೈನ್ ಮಾಡಲಾಗಿದೆ. ಆದರೆ ಶೇ. 50ರಷ್ಟು ಜನ ಕೊನೆ ದಿನವೇ ಬರುತ್ತಾರೆ ಎಂದು ನವೀನ್ ಕುಮಾರ್ ತಿಳಿಸಿದ್ದಾರೆ.
ಭಾರತದ ಅತಿದೊಡ್ಡ ತೆರಿಗೆ ಸುಧಾರಣೆಯಾಗಿ ಬಿಂಬಿತವಾದ ಜಿಎಸ್ ಟಿ, ಒಕ್ಕೂಟ ಮತ್ತು ರಾಜ್ಯಗಳಿಗೆ ಒಂದೇ ರೀತಿಯ ತೆರಿಗೆ ಪಟ್ಟಿಯನ್ನು ಒಳಗೊಂಡಿದೆ. ಇದು ಭಾರತದ 29 ರಾಜ್ಯಗಳ ನಡುವಿನ ಅಡೆತಡೆಗಳನ್ನು ಮುಕ್ತಗೊಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com