ಪನಾಮಾ ಪೇಪರ್ಸ್ ಬಗ್ಗೆ ತನಿಖೆ ನಡೆಯುತ್ತಿದೆ, ಆದ್ರೆ ಪಾಕ್ ಮಾದರಿ ಅನುಸರಿಸಲ್ಲ: ಅರುಣ್ ಜೇಟ್ಲಿ

ಪನಾಮಾ ಪೇಪರ್ಸ್ ಲೀಕ್ ಮಾಡಿರುವ ಪ್ರತಿ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತೇವೆ. ಆದರೆ ಈ ವಿಚಾರದಲ್ಲಿ ಭಾರತ ಪಾಕಿಸ್ತಾನ ಮಾದರಿಯನ್ನು...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ
ನವದೆಹಲಿ: ಪನಾಮಾ ಪೇಪರ್ಸ್ ಲೀಕ್ ಮಾಡಿರುವ ಪ್ರತಿ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತೇವೆ. ಆದರೆ ಈ ವಿಚಾರದಲ್ಲಿ ಭಾರತ ಪಾಕಿಸ್ತಾನ ಮಾದರಿಯನ್ನು ಅನುಸರಿಸುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಗುರುವಾರ ರಾಜ್ಯಸಭೆಗೆ ತಿಳಿಸಿದ್ದಾರೆ.
ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ ಮೇಲಿನ ಚರ್ಚೆಯ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಜೇಟ್ಲಿ, ಸೂಕ್ತ ತನಿಖೆ ಇಲ್ಲದೆ ಯಾರನ್ನೂ ಶಿಕ್ಷಿಸಲು ಬರುವುದಿಲ್ಲ. ವಿದೇಶಿ ಖಾತೆಗಳಿಗೆ ಸಂಬಂಧಸಿದಂತೆ ನಮ್ಮ ಸರ್ಕಾರ ಈ ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಹೆಚ್ಚು ಕ್ರಮ ತೆಗೆದುಕೊಂಡಿದೆ ಎಂದರು.
ಪನಾಮಾ ಪೇಪರ್ಸ್ ಲೀಕ್ ಮಾಡಿದ ಖಾತೆಗಳ ಬಗ್ಗೆ ತರಿಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ದಾಖಲೆಗಳು ಸಿಕ್ಕ ನಂತರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜೇಟ್ಲಿ ತಿಳಿಸಿದ್ದಾರೆ.
ನಮಗೆ ನಮ್ಮದೆ ಆದ ಕಾನೂನು ಇದೆ. ನೆರೆಯ ದೇಶದಂತೆ ಮೊದಲು ರಾಜಿನಾಮೆ ನೀಡಿ ನಂತರ ವಿಚಾರಣೆ ಎದುರಿಸುವ ಪದ್ದತಿ ನಮ್ಮಲ್ಲಿ ಇಲ್ಲ ಎಂದು ಜೇಟ್ಲಿ ಅವರು ಪರೋಕ್ಷವಾಗಿ ಪನಾಮಾ ಪೇಪರ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ತಿಂಗಳು ಪಾಕ್ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ ನವಾಜ್ ಷರೀಫ್ ವಿಷಯ ಪ್ರಸ್ತಾಪಿಸಿದರು.
ಪನಾಮ ಪೇಪರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕ್ ಸುಪ್ರೀಂ ಕೋರ್ಟ್ ನವಾಜ್ ಷರೀಫ್ ಅವರನ್ನು ಅನರ್ಹಗೊಳಿಸಿದ ನಂತರ ಪ್ರಧಾನಿ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com