ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳ ಕೈಗಾರಿಕೆಗೆ ತೆರಿಗೆ ವಿನಾಯಿತಿ ಮುಂದುವರಿಕೆ: ಜೇಟ್ಲಿ

ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳ ಕೈಗಾರಿಕೆಗಳು ಮಾರ್ಚ್ 2027 ರ ವರೆಗೆ ತೆರಿಗೆ ವಿನಾಯಿತಿ ಪಡೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ತಿಳಿಸಿದ್ದಾರೆ.
ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳ ಕೈಗಾರಿಕೆಗೆ ತೆರಿಗೆ ವಿನಾಯಿತಿ ಮುಂದುವರಿಕೆ
ಈಶಾನ್ಯ ಹಾಗೂ ಹಿಮಾಲಯ ರಾಜ್ಯಗಳ ಕೈಗಾರಿಕೆಗೆ ತೆರಿಗೆ ವಿನಾಯಿತಿ ಮುಂದುವರಿಕೆ
ನವದೆಹಲಿ: ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳ ಕೈಗಾರಿಕೆಗಳು  ಮಾರ್ಚ್ 2027 ರ ವರೆಗೆ ತೆರಿಗೆ ವಿನಾಯಿತಿ ಪಡೆಯಲಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೆಟ್ಲಿ ತಿಳಿಸಿದ್ದಾರೆ. 
ಜುಲೈ 1 ರಿಂದ ಜಾರಿಗೆ ಬಂದ ಜಿಎಸ್ ಟಿ ತೆರಿಗೆ ಸಹ ಮರುಪಾವತಿ ಆಗುವಂತೆ ಈ ತೆರಿಗೆ ವಿನಾಯಿತಿ ಇರಲಿದೆ.
"ಜಿಎಸ್ಟಿ ಕಾಯ್ದೆಯ ಚೌಕಟ್ಟಿನೊಳಗೆ, ಪ್ರತಿ ಉದ್ಯಮವು ಈ ನಿರ್ದಿಷ್ಟ ಅವಧಿಯಲ್ಲಿ (ಮಾರ್ಚ್ 31, 2027) ತನ್ನದೇ ಆದ ಮರುಪಾವತಿ ವ್ಯವಸ್ಥೆಗೆ ಅರ್ಹತೆ ಪಡೆಯುತ್ತದೆ "ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯ ಬಳಿಕ ಬಳಿಕ ಅವರು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯ ರಾಜ್ಯಗಳಾದ ಜಮ್ಮು ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡ್ ಈ ತೆರಿಗೆ ವಿನಾಯಿತಿ ಪಡೆಯುವ ಅರ್ಹ ರಾಜ್ಯಗಳಾಗಿವೆ. ಈ ಯೋಜನೆಯ ಪ್ರಕಾರ, ಉದ್ಯಮಗಳು 10 ವರ್ಷಗಳ ಕಾಲ ಅಬಕಾರಿ ತೆರಿಗೆ ವಿನಾಯಿತಿಯನ್ನು ಪಡೆಯಲಿವೆ ಎಂದು ಜೇಟ್ಲಿ ಮಾಹಿತಿ ನೀಡಿದ್ದಾರೆ. 
ಹೊಸದಾಗಿ ಜಾರಿಗೆ ಬಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಯಲ್ಲಿ ತೆರಿಗೆ ವಿನಾಯಿತಿಗೆ ಯಾವುದೇ ನಿಬಂಧನೆ ಇಲ್ಲ.  ಈ ಕೈಗಾರಿಕೆಗಳಿಗೆ ತೆರಿಗೆ ಮರುಪಾವತಿಗೆ ಡಿಬಿಟಿ ಮೂಲಕ ಅನುಮತಿ ನೀಡಲಾಗುವುದು ಈ ವಿನಾಯಿತಿಯ ಷರತ್ತು 2027 ಕ್ಕೆ ಮುಗಿಯಲಿದ್ದು ಒಟ್ಟು 4,284 ಕೈಗಾರಿಕೆಗಳು ಈ ಯೋಜನೆಯ ಅನುಕೂಲ ಪಡೆಯಲಿದೆ. ಒಟ್ತಾರೆ ಯೋಜನೆ 27,413  ಕೋಟಿ ರೂ.ಬಜೆಟ್ ಗಾತ್ರವನ್ನು ಹೊಂದಿದೆ ಎಂದು ಜೇಟ್ಲಿ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com