ನಾರಾಯಣ ಮೂರ್ತಿ ವಿರುದ್ಧ ಇನ್ಫೋಸಿಸ್ ಮಂಡಳಿ ವಾಗ್ದಾಳಿ: ಆಡಳಿತ ಮಂಡಳಿಯಲ್ಲಿ ಹುದ್ದೆ ನೀಡಲು ನಿರಾಕರಣೆ

ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ವಿರುದ್ಧ ಇನ್ಫೋಸಿಸ್ ಮಂಡಳಿ ವಾಗ್ದಾಳಿ ನಡೆಸಿದ್ದು, ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಸೂಕ್ತವಲ್ಲದ ಬೇಡಿಕೆಗಳನ್ನು ಮುಂದಿಟ್ಟಿದ್ದರು...
ನಾರಾಯಣ ಮೂರ್ತಿ
ನಾರಾಯಣ ಮೂರ್ತಿ
ಬೆಂಗಳೂರು: ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ವಿರುದ್ಧ ಇನ್ಫೋಸಿಸ್ ಮಂಡಳಿ ವಾಗ್ದಾಳಿ ನಡೆಸಿದ್ದು, ಇನ್ಫೋಸಿಸ್ ನಾರಾಯಣ ಮೂರ್ತಿ ಅವರು ಸೂಕ್ತವಲ್ಲದ ಬೇಡಿಕೆಗಳನ್ನು ಮುಂದಿಟ್ಟಿದ್ದರು, ಆದರೆ ಅವರಿಗೆ ಆಡಳಿತ ಮಂಡಳಿಯಲ್ಲಿ ಔಪಚಾರಿಕ ಪಾತ್ರ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 
ಇದೇ ಮೊದಲ ಬಾರಿಗೆ ಇನ್ಫೋಸಿಸ್ ಮಂಡಳಿ ನಾರಾಯಣ ಮೂರ್ತಿ ವಿರುದ್ಧ ಮಾತನಾಡಿದ್ದಾರೆ. ಈ ಹಿಂದೆ ಇನ್ಫೋಸಿಸ್ ಮಂಡಳಿ ನೀಡಿದ್ದ ಹೇಳಿಕೆಗಳಲ್ಲಿ ನಾರಾಯಣ ಮೂರ್ತಿ ಅವರು ಪ್ರಮುಖ ಪಾತ್ರ ಹೊಂದಿದ್ದಾರೆ, ಅವರ ಮಾರ್ಗದರ್ಶನ ಮೌಲ್ಯಯುತವಾದದ್ದು ಎಂದು ಹೇಳಿತ್ತು. ಆದರೆ ಇನ್ಫೋಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರ ನಿರ್ಗಮನದನಂತರ ಆಡಳಿತ ಮಂಡಳಿ ನಾರಾಯಣ ಮೂರ್ತಿ ಅವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಹೇಳಿಕೆ ನೀಡಿದೆ. 
ನಾರಾಯಣ ಮೂರ್ತಿ ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದರು, ಬದಲಾವಣೆಗಳಾಗದಿದ್ದಲ್ಲಿ ಆಡಳಿತ ಮಂಡಳಿಯಲ್ಲಿರುವವರ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದಾಗಿ ಹೇಳಿದ್ದರು, ಮಾಧ್ಯಮಗಳೆದುರು ಆಡಳಿತ ಮಂಡಳಿಯ ಬಗ್ಗೆ ಮಾತನಾಡುವುದಾಗಿ ಎಚ್ಚರಿಕೆ ನೀಡಿದ್ದರು. ಅಷ್ಟೇ ಅಲ್ಲದೇ ಮ್ಯಾನೇಜ್ಮೆಂಟ್ ಸಂಭಾವನೆಗೆ ಸಂಬಂಧಿಸಿದಂತೆ ಮತಚಲಾವಣೆಯಾದಾಗ ನಾರಾಯಣ ಮೂರ್ತಿ ಅವರು ಉಳಿದ ಷೇರುದಾರರಿಗಿಂತ ಮೇಲುಗೈ ಸಾಧಿಸಲು ಯತ್ನಿಸಿದ್ದರು ಎಂದು ಆಡಳಿತ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com