ಸಿಕ್ಕಾ ರಾಜೀನಾಮೆ ಬೆನ್ನಲ್ಲೇ 208 ಅಂಕ ಕುಸಿತ ಕಂಡ ಸೆನ್ಸೆಕ್ಸ್

ಮುಂಬೈ ಷೇರು ಮರುಕಟ್ಟೆ ಬಿಎಸ್ ಇ ಇಂದಿನ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 208 ಅಂಕಗಳ ಕುಸಿತ ದಾಖಲಿಸಿದೆ.
ಸಿಕ್ಕಾ ರಾಜೀನಾಮೆ ಬೆನ್ನಲ್ಲೆ 208 ಅಂಕ ಕುಸಿತ ಕಂದ ಸೆನ್ಸೆಕ್ಸ್
ಸಿಕ್ಕಾ ರಾಜೀನಾಮೆ ಬೆನ್ನಲ್ಲೆ 208 ಅಂಕ ಕುಸಿತ ಕಂದ ಸೆನ್ಸೆಕ್ಸ್
ಮುಂಬೈ :ಮುಂಬೈ ಷೇರು ಮರುಕಟ್ಟೆ ಬಿಎಸ್ ಇ ಇಂದಿನ ದಿನದ ಪ್ರಾರಂಭಿಕ ವಹಿವಾಟಿನಲ್ಲಿ 208 ಅಂಕಗಳ ಕುಸಿತ ದಾಖಲಿಸಿದೆ. ಇನ್ಫೋಸಿಸ್ ಆರಂಭಿಕ ವಹಿವಾಟಿನಲ್ಲಿ ಶೇ 7 ರಷ್ಟು ಕುಸಿತ ಉಂತಾಗಿದೆ. ಇನ್ಫೋಸಿಸ್ ಎಂಡಿ ಮತ್ತು ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದರ ಪರಿಣಾಮವಾಗಿದೆ.
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರ್ಥಿಕ ನೀತಿಯೂ ಹೂಡಿಕೆದಾರರನ್ನು ಷೇರು ಹೂಡಿಕೆಯಿಂದ ಹಿಂದೆ ಸರಿಯುವಂತೆ ಮಾಡಿದೆ ಎನ್ನಲಾಗುತ್ತಿದೆ.
ಸೆನ್ಸೆಕ್ಸ್ 207.75 ಪಾಯಿಂಟ್ ಅಥವಾ ಶೇಕಡ 0.65 31,ಕ್ಕೆ ಇಳಿಕೆಯಾಗಿದೆ. ಐಟಿ, ಟೆಕ್, ಬ್ಯಾಂಕ್, ಆರೋಗ್ಯ, ಲೋಹ, ಆಟೋ ಮತ್ತು ರಿಯಾಲ್ಟಿಗಳು 2.43 ಶೇಕಡಕ್ಕೆ ಕುಸಿದಿದೆ. ಇದೇ ರೀತಿಯಾಗಿ ರಾಷ್ಟ್ರೀಯ ಷೇರು ವಿನಿಮಯ ಸೂಚ್ಯಂಕ ನಿಫ್ಟಿ 73.95 ಪಾಯಿಂಟ್ ಕ್ಕೆ ಇಳಿದಿದೆ.
ಸನ್ ಫಾರ್ಮಾ, ಎಚ್ಡಿಎಫ್ಸಿ ಲಿಮಿಟೆಡ್, ಟಾಟಾ ಮೋಟಾರ್ಸ್, ಎಸ್ಬಿಐ, ಕೊಟಾಕ್ ಬ್ಯಾಂಕ್, ಎಚ್ಡಿಎಫ್ಸಿ ಬ್ಯಾಂಕ್, ಲುಪಿನ್, ಅದಾನಿ ಬಂದರುಗಳು, ಆಕ್ಸಿಸ್ ಬ್ಯಾಂಕ್, ಡಾ. ರೆಡ್ಡೀಸ್, ಕೋಲ್ ಇಂಡಿಯಾ ಮತ್ತು ಟಾಟಾ ಸ್ಟೀಲ್ ಪ್ರಮುಖವಾದ ಸೂಚ್ಯಂಕಗಳನ್ನು ಕೆಳಕ್ಕಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com