ಸರ್ಕಾರಿ ಬ್ಯಂಕ್ ಗಳಿಗೆ ಮರುಬಂಡವಾಳ ತೊಡಗಿಸುವ ಪ್ರಕ್ರಿಯೆಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೇಲ್ ಕರೆ

ಬ್ಯಾಡ್ ಲೋನ್ ಗಳ ಪ್ರಮಾಣ ಶೇ.9.6 ರಷ್ಟಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಬಂಡವಾಳ ತೊಡಗಿಸುವ ಪ್ರಕ್ರಿಯೆಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೆಲ್ ಕರೆ ನೀಡಿದ್ದಾರೆ.
ಉರ್ಜಿತ್ ಪಟೇಲ್
ಉರ್ಜಿತ್ ಪಟೇಲ್
ಮುಂಬೈ: ಬ್ಯಾಡ್ ಲೋನ್ ಗಳ ಪ್ರಮಾಣ ಶೇ.9.6 ರಷ್ಟಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಬಂಡವಾಳ ತೊಡಗಿಸುವ ಪ್ರಕ್ರಿಯೆಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೆಲ್ ಕರೆ ನೀಡಿದ್ದಾರೆ. 
ಬ್ಯಾಂಕರ್ ಗಳು ಹಾಗೂ ಕೈಗಾರಿಕೋದ್ಯಮಿಗಳು, ವಿತ್ತ ಸಚಿವ ಅರುಣ್ ಜೇಟ್ಲಿ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಉರ್ಜಿತ್ ಪಟೇಲ್, ಶೇ.9.6 ರಷ್ಟು ಬ್ಯಾಡ್ ಲೋನ್ ಸೂಕ್ತವಾದುದ್ದಲ್ಲ. ಎನ್ ಪಿಎ ಅನುಪಾತ ಶೇ.9.6 ರಷ್ಟು ಒಳ್ಳೆಯ ಬೆಳವಣಿಗೆಯಲ್ಲ, ಆತಂಕಕಾರಿಯಾದ ಬೆಳವಣಿಗೆಯಾಗಿದೆ ಎಂದಿದ್ದಾರೆ. 
ಸರ್ಕಾರಿ ಸ್ವಾಮ್ಯದ ಅನೇಕ ಬ್ಯಾಂಕ್ ಗಳ ಬ್ಯಾಲೆನ್ಸ್ ಶೀಟ್ ಆರೋಗ್ಯಕರವಾಗಿಲ್ಲ, ಬ್ಯಾಡ್ ಲೋನ್ ಗಳ ಪರಿಣಾಮದಿಂದ ಈ ಪರಿಸ್ಥಿತಿ ಉಂಟಾಗಿದ್ದು, ಮರುಬಂಡವಾಳ ತೊಡಗಿಸುವ ಅಗತ್ಯವಿದೆ ಎಂದು ಉರ್ಜಿತ್ ಪಟೇಲ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com