ಏರ್ ಇಂಡಿಯಾ ಅಧ್ಯಕ್ಷರಾಗಿ ರಾಜೀವ್ ಬನ್ಸಾಲ್ ನೇಮಕ

ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರನ್ನು ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜೀವ್ ಬನ್ಸಾಲ್
ರಾಜೀವ್ ಬನ್ಸಾಲ್
ಹೊಸದಿಲ್ಲಿ: ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ಅವರನ್ನು ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಸ್ತುತ ಪೆನ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ  ಹಣಕಾಸು ಸಲಹೆಗಾರ ಆಗಿರುವ ಬನ್ಸಾಲ್ ರನ್ನು ಹೆಚ್ಚುವರಿ ಹುದ್ದೆ  ಏರ್ ಇಂಡಿಯಾ ಸಿಎಂ ಡಿ . ಆಗಿ ಬುಧವಾರ ನೇಮಿಸಲಾಗಿದೆ. ಅವರು ರೈಲ್ವೇ ಮಂಡಳಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಅಶ್ವನಿ ಲೋಹಾನಿ ಸ್ಥಾನಕ್ಕೆ ನೇಮಕವಾಗಿರುತ್ತಾರೆ.
ಬನ್ಸಾಲ್ ಅವರ ನೇಮಕಾತಿಯನ್ನು ಸಂಸದೀಯ ನೇಮಕಾತಿ ಸಮಿತಿ ಅನುಮೋದಿಸಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ಬನ್ಸಾಲ್ ನಾಗಾಲ್ಯಾಂಡ್ ಕೆಡರ್ಸ್ ನ 1988 ಬ್ಯಾಚ್ ಐಎಎಸ್ ಅಧಿಕಾರಿ ಆಗಿದ್ದಾರೆ.
ಇನ್ನೊಂದು ಮಹತ್ವದ ಬೆಳವಣಿಗೆಯಲ್ಲಿ ಅಶ್ವನಿ ಲೋಹಾನಿ ಅವರನ್ನು ರೈಲ್ವೆ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ರೈಲು ದುರಂತಗಳ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿಯ ಅಧ್ಯಕ್ಷರಾಗಿದ್ದ ಎ.ಕೆ.ಮಿತ್ತಲ್‌ ರಾಜೀನಾಮೆ ನೀಡಿದ್ದು ಆ ಸ್ಥಾನಕ್ಕೆ ಅಶ್ವನಿ ಲೋಹಾನಿ ಅವರನ್ನು ನೇಮಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com