ಟಾಟಾ ಸನ್ಸ್ ನ ನೂತನ ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಂಡ ರೂಪಾ ಪುರುಷೋತ್ತಮ

ರೂಪಾ ಪುರುಷೋತ್ತಮ ಅವರನ್ನು ತಮ್ಮ ಸಂಸ್ಥೆಯ ನೂತನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಪಾಲಿಸಿ ಅಡ್ವೊಕಸಿ ಮುಖ್ಯಸ್ಥರಾಗಿ ಟಾಟಾ ಸನ್ಸ್ ನೇಮಕ ಮಾಡಿದೆ.
ರೂಪಾ ಪುರುಷೋತ್ತಮ
ರೂಪಾ ಪುರುಷೋತ್ತಮ
ಹೊಸದಿಲ್ಲಿ:: ರೂಪಾ ಪುರುಷೋತ್ತಮ ಅವರನ್ನು ತಮ್ಮ ಸಂಸ್ಥೆಯ ನೂತನ ಮುಖ್ಯ ಅರ್ಥಶಾಸ್ತ್ರಜ್ಞ ಮತ್ತು ಪಾಲಿಸಿ ಅಡ್ವೊಕಸಿ ಮುಖ್ಯಸ್ಥರಾಗಿ ಟಾಟಾ ಸನ್ಸ್ ನೇಮಕ ಮಾಡಿದೆ.
ಸೆಪ್ಟೆಂಬರ್ 1 ರಿಂದ ಟಾಟಾ ಸನ್ಸ್ ಗೆ ಸೇರ್ಪಡೆಗೊಳ್ಳುವ ಪುರುಷೋತ್ತಮ, ಎವರ್ಸ್ಟೋನ್ ಕ್ಯಾಪಿಟಲ್ ನಿಂದ  ಬಂದಿದ್ದು, ಅಲ್ಲಿ ಅವರು ಆರ್ಥಿಕ ಸಂಶೋಧಕರಾಗಿದ್ದರು.
"ಪುರುಷೋತ್ತಮ ತನ್ನ ಹುದ್ದೆಯಲ್ಲಿ , ಮ್ಯಾಕ್ರೋ ಎಕನಾಮಿಕ್ ರಿಸರ್ಚ್ ಮತ್ತು ಟಾಟಾ ಗುಂಪಿನ ವ್ಯವಹಾರಗಳಿಗೆ ಸಂಬಂಧಿಸಿದೆ ಸಂಸ್ಥೆಯ ನೀತಿ ಮತ್ತು ವಕಾಲತ್ತು ಉಪಕ್ರಮಗಳನ್ನು ಮುನ್ನಡೆಸಲಿದ್ದಾರೆ" ಎಂದು ಟಾಟಾ ಸನ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಯೇಲ್ ವಿಶ್ವವಿದ್ಯಾಲಯದಿಂದ ಪದವೀಧರರಾಗಿದ್ದ ರೂಪಾ ಪುರುಷೋತ್ತಮ್, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಹಿಂದೆ ಗೋಲ್ಡ್ಮನ್ ಸ್ಯಾಚ್ಸ್ ಇಂಟರ್ನ್ಯಾಷನಲ್ ನಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮತ್ತು ಜಾಗತಿಕ ಆರ್ಥಿಕತಜ್ಞರಾಗಿ ಕೆಲಸ ಮಾಡಿದ್ದಾರೆ.
"ದೀರ್ಘಕಾಲೀನ ವೃತ್ತಿಜೀವನದಲ್ಲಿ, ಪುರುಷೋತ್ತಮ ಬ್ರಿಕ್ ದೇಶಗಳಲ್ಲಿ ಉನ್ನತ ಸಂಶೋಧನೆ ಸೇರಿದಂತೆ ಶ್ರೇಷ್ಠ ದರ್ಜೆಯ ಕೆಲಸ ನಿರ್ವಹಿಸಿದ್ದಾರೆ. ಅಲ್ಲದೆ ಸಾಕಷ್ಟು ಸಂಖ್ಯೆಯ ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ" ಎಂದು ಹೇಳಿಕೆ ತಿಳಿಸಿದೆ.
"ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಮತ್ತು ಬಹುಮುಖ ಪಾತ್ರವನ್ನು ವಹಿಸುವ ಟಾಟಾ ಸಮೂಹವು ಉನ್ನತ ಸಂಸ್ಥೆಯಾಗಿದ್ದು, ಈ ಗುಂಪಿನ ಭಾಗವಾಗಿ, ದೇಶದ ಬೆಳವಣಿಗೆ ಯಲ್ಲಿತೊಡಗಿಕೊಳ್ಳುವುದು ನಿಜಕ್ಕೂ ಅನನ್ಯ ಅನುಭವ" ರೂಪಾ ಪುರುಷೋತ್ತಮ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com