ಆಧಾರ್-ಪಾನ್ ಜೋಡಣೆ ಮುಂದುವರಿಯಲಿದೆ: ಯುಐಡಿಎಐ ಸಿಇಒ

ಬಯೋಮೆಟ್ರಿಕ್ ಐಡೆಂಟಿಫೈಯರ್ ಆಧಾರ್ ಜೊತೆಗೆ ಪ್ಯಾನ್ ಅನ್ನು ಜೋಡಿಸುವ ಕೆಲಸ ಈ ಹಿಂದಿನ ನಿರ್ದೇಶನದಂತೆಯೇ ಮುಂದುವರಿಯಲಿದೆ,
ಆಥಾರ್-ಪಾನ್ ಜೋಡಣೆ ಮುಂದುವರಿಯಲಿದೆ:
ಆಥಾರ್-ಪಾನ್ ಜೋಡಣೆ ಮುಂದುವರಿಯಲಿದೆ:
ಹೊಸದಿಲ್ಲಿ: ಬಯೋಮೆಟ್ರಿಕ್ ಐಡೆಂಟಿಫೈಯರ್ ಆಧಾರ್ ಜೊತೆಗೆ ಪ್ಯಾನ್ ಅನ್ನು ಜೋಡಿಸುವ ಕೆಲಸ ಈ ಹಿಂದಿನ ನಿರ್ದೇಶನದಂತೆಯೇ ಮುಂದುವರಿಯಲಿದೆ, ವಿವಿಧ ಸರ್ಕಾರಿ ಸಬ್ಸಿಡಿಗಳನ್ನು ಪಡೆಯಲು 12-ಅಂಕಿಯ ಆಧಾರ್ ಸಂಖ್ಯೆಯನ್ನು ಹೊಂದಿರುವುದು ಅಗತ್ಯ ಎಂದು ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ ಹೇಳಿದ್ದಾರೆ.
ಖಾಸಗಿತನ ಮೂಲಭೂತ ಹಕ್ಕು ಎನ್ನುವ ವ ಸುಪ್ರೀಂ ಕೋರ್ಟ್ ತೀರ್ಪು ಆಧಾರ್ ಮತ್ತು ಪ್ಯಾನ್ ನಂಬರ್ ಜೋಡಣೆ ಮೇಲೆ ಯಾವ ಪರಿಣಾಮ ಉಂಟು ಮಾಡಿಲ್ಲ, ಸಬ್ಸಿಡಿ ಸಹಿತ ಅಡುಗೆ ಅನಿಲವನ್ನು ಪಡೆಯಲು, ಬ್ಯಾಂಕಿನ ಖಾತೆ ತೆರೆಯಲು ಮತ್ತು ಹೊಸ ಫೋನ್ ಸಂಖ್ಯೆಯನ್ನು ಪಡೆದುಕೊಳ್ಳುವುದು ಸೇರಿ ವಿವಿಧ ಸೇವೆಗಳಿಗೆ ಆಧಾರ್ ಕಡ್ದಾಯವಾಗಿದೆ. ಆಧಾರ್ ಅಧಿನಿಯಮವು ಖಾಸಗಿತನದ ಹಕ್ಕನ್ನು ಉಲ್ಲಂಘಿಸುವುದಿಲ್ಲ ಎಂದು ಅವರು ಹೇಳಿದರು.
ಜನರ ಖಾಸಗಿ ಮಾಹಿತಿಯನ್ನು ನಾವೆರಂದೂ ಬಹಿರಂಗಪಡಿಸುವುದಿಲ್ಲ ಎಂದು ಪಾಂಡೆ ಪಿಟಿಐಗೆ ತಿಳಿಸಿದ್ದಾರೆ. ಇಂದಿನ ಸುಪ್ರೀಂ ಕೋರ್ಟ್ ತೀರ್ಪು ಆಧಾರ್ ಕಾಯ್ದೆ ಬಗ್ಗೆ ಏನನ್ನೂ ಹೇಳಲಿಲ್ಲ, ಆದ್ದರಿಂದ ಆಧಾರ್ ಕಾಯ್ದೆ ಸಂಸತ್ತು ಜಾರಿಗೊಳಿಸಿದ ಕಾಯ್ದೆ ಆಗಿದೆ  ಇದು ಈ ನೆಲದ ಕಾನೂನುಯಾಗಿದೆ ಎಂದು ಅವರು ಹೇಳಿದರು.
ಆಧಾರ್ ಅಧಿನಿಯಮದ ಸೆಕ್ಷನ್ 7 "ಕೆಲವು ಸಬ್ಸಿಡಿಯನ್ನು ಪಡೆದುಕೊಳ್ಳಲು ಅಥವಾ ಸರ್ಕಾರದ ಯೋಜನೆಗಳ ಪ್ರಯೋಜನಕ್ಕಾಗಿ ಆಧಾರ್ ಸಂಖ್ಯೆಯನ್ನು ಕೇಳಬಹುದು ಎಂದು ಸೂಚಿಸುತ್ತದೆ" ಎಂದು ಅವರು ಹೇಳಿದರು. ಇಂದಿನ ಆದೇಶದ ಹಿನ್ನೆಲೆಯಲ್ಲಿ ಯಾರಾದರೂ ತಮ್ಮ ವಿವರಗಳನ್ನು ನೀಡಲು ನಿರಾಕರಿಸಬಹುದೆ ಎಂದು ಕೇಳಿದಾಗ ಅವರು, "ಇಂದಿನವರೆಗೂ, ಆಧಾರ್ ಕಾಯ್ದೆಯು ಮಾನ್ಯತೆ ಹೊಂದಿದ ಕಾಯಿದೆ ಆಗಿದೆ ಮತ್ತು ಈ ತೀರ್ಪು ಆಧಾರ್ ಅಧಿನಿಯಮದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಆಧಾರ್ ದಾಖಲಾತಿ ನಿಲ್ಲುವುದಿಲ್ಲ ಎಂದು ಪಾಂಡೆ ಹೇಳಿದರು. ಆದಾಯ ತೆರಿಗೆ ಪಾವತಿದಾರರಿಗೆ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ಜೊತೆಗೆ ಆಧಾರ್ ಸಂಪರ್ಕಿಸುವುದನ್ನು ಕಡ್ಡಾಯಗೊಳಿಸಲಾಗಿದೆದ್, ಆದಾಯ ತೆರಿಗೆ ಕಾಯಿದೆಯ ತಿದ್ದುಪಡಿಯಿಂದೀ ನಿಬಂಧನೆ ಜಾರಿಯಾಗಿದೆ ಎಂದು ಅವರು ಹೇಳಿದರು. "ಕಾನೂನಿನ ಅಡಿಯಲ್ಲಿ ಆಧಾರ್ ಮತ್ತು ಪ್ಯಾನ್ ಲಿಂಕ್ ಮಾಡುವುದು ಮುಂದುವರಿಯುತ್ತದೆ, ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ" ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com