ಶೇ.99ರಷ್ಟು ನಿಷೇಧಿತ 1000 ರು. ಮುಖಬೆಲೆಯ ನೋಟುಗಳು ವಾಪಸ್ ಬಂದಿವೆ: ಆರ್ ಬಿಐ ವಾರ್ಷಿಕ ವರದಿ

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ 8,900 ಕೋಟಿ ರುಪಾಯಿ ಮೌಲ್ಯದ 8.9 ಕೋಟಿ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ಗಳನ್ನು ನಿಷೇಧಿಸಿದ ನಂತರ 8,900 ಕೋಟಿ ರುಪಾಯಿ ಮೌಲ್ಯದ 8.9 ಕೋಟಿ 1,000 ರುಪಾಯಿ ನೋಟ್(ಶೇ.1.4ರಷ್ಟು) ಗಳು ವಾಪಸ್ ಬಂದಿಲ್ಲ ಎಂದು ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ)ನ ವಾರ್ಷಿಕ ವರದಿ ಬಹಿರಂಗಪಡಿಸಿದೆ.
2017ರ ಮಾರ್ಚ್‌ 31ರವರೆಗೆ 1000 ರುಪಾಯಿ ಮುಖಬೆಲೆಯ 632.6 ಕೋಟಿ ನೋಟುಗಳು ವಾಪಸ್‌ ಬಂದಿದ್ದು, 8.9 ಕೋಟಿ ನೋಟುಗಳು ವಾಪಸ್‌ ಬಂದಿಲ್ಲ ಎಂದು ಆರ್ ಬಿಐ ತಿಳಿಸಿದೆ.
ಒಟ್ಟು 15.44 ಲಕ್ಷ ಕೋಟಿ ನಿಷೇಧಿತ ನೋಟ್ ಗಳ ಪೈಕಿ 15.28 ಲಕ್ಷ ಕೋಟಿ ಅಥವಾ ಶೇ.99ರಷ್ಟು ನೋಟ್ ಗಳು ವಾಪಸ್ ಕೇಂದ್ರೀಯ ಬ್ಯಾಂಕ್ ಸೇರಿವೆ. ಆದರೆ ನೋಟ್ ನಿಷೇಧದ ನಂತರ ಹೊಸ ನೋಟ್ ಮುದ್ರಣ ವೆಚ್ಚ ಡಬಲ್ ಆಗಿದ್ದು, ಹೊಸ ನೋಟಿಗಾಗಿ 2017ರ ಹಣಕಾಸು ವರ್ಷದಲ್ಲಿ ಒಟ್ಟು 7,965 ಕೋಟಿ ರುಪಾಯಿ ವೆಚ್ಚವಾಗಿದೆ. ಕಳೆದ ಹಣಕಾಸು ವರ್ಷದಲ್ಲಿ 3,421 ಕೋಟಿ ವೆಚ್ಚವಾಗಿತ್ತು ಎಂದು ಆರ್ ಬಿಐ ತನ್ನ ವಾರ್ಷಿಕ ವರದಿಯಲ್ಲಿ ತಿಳಿಸಿದೆ.
ಭ್ರಷ್ಟಾಚಾರ, ಕಪ್ಪು ಹಣ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ತಡೆಯುವುದಕ್ಕಾಗಿ ಕಳೆದ ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಹಾಗೂ 1,000 ರುಪಾಯಿ ನೋಟ್ ನೀಷೇಧಿಸುವುದಾಗಿ ಘೋಷಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com