ಭೂಕಂಪಕ್ಕೆ ಸಿಲುಕಿ ಹಾನಿಗೊಳಗಾದ ಪಗೋಡ ಸಂರಕ್ಷಣೆಗೆ ಭಾರತದ ಸಹಕಾರ

ಮಾಯನ್ಮಾರ್ ನಲ್ಲಿ ಭೂಕಂಪಕ್ಕೆ ಸಿಲುಕಿ ಹಾನಿಗೊಳಗಾದ ಪಗೋಡ ಸಂರಕ್ಷಣೆಗೆ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ.
ಪಗೋಡಾ
ಪಗೋಡಾ
ನವದೆಹಲಿ: ಮಾಯನ್ಮಾರ್ ನಲ್ಲಿ ಭೂಕಂಪಕ್ಕೆ ಸಿಲುಕಿ ಹಾನಿಗೊಳಗಾದ ಪಗೋಡ ಸಂರಕ್ಷಣೆಗೆ ನೆರವು ನೀಡಲು ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. 
ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 6-7 ರಂದು ಮಾಯನ್ಮಾರ್ ಗೆ ಭೇಟಿ ನೀಡಲಿದ್ದು, ಪಗೋಡ ಸಂರಕ್ಷಣೆಗೆ ನೆರವು ನೀಡುವುದರ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ನಿರ್ಧಾರದಿಂದ ಉಭಯ ರಾಷ್ಟ್ರಗಳ ಸಂಬಂಧ ವೃದ್ಧಿಸಲಿದೆ ಎಂದು ಕೇಂದ್ರ ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ. 
ಪಗೋಡಗ ಇರುವ ಮಾಯನ್ಮಾರ್ ನ ಪ್ರದೇಶ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇದನ್ನು ಸಂರಕ್ಷಿಸಲು ನೆರವು ನೀಡುವುದರಿಂದ ಪುರಾತನ ಸ್ಮಾರಕಗಳನ್ನು ರಕ್ಷಿಸುವ ಭಾರತದ ಪರಿಣಿತಿಯೂ ಪ್ರಸಿದ್ಧಿ ಪಡೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com