ನೋಟ್ ನಿಷೇಧದ ನಂತರ ಜಮೆಯಾದ 2,89 ಲಕ್ಷ ಕೋಟಿ ಹಣದ ಮೇಲೆ ಐಟಿ ಕಣ್ಣು

ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಗಳಲ್ಲಿ ಜಮೆಯಾದ 2.89 ಲಕ್ಷ ಕೋಟಿ ರುಪಾಯಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ರುಪಾಯಿ ನೋಟ್ ನಿಷೇಧಿಸಿದ ನಂತರ ಬ್ಯಾಂಕ್ ಗಳಲ್ಲಿ ಜಮೆಯಾದ 2.89 ಲಕ್ಷ ಕೋಟಿ ರುಪಾಯಿ ನಗದನ್ನು ಪರಿಶೀಲಿಸಲಾಗುತ್ತಿದೆ ಎಂದು ಆದಾಯ ತೆರಿಗೆ ಇಲಾಖೆ ಗುರುವಾರ ತಿಳಿಸಿದೆ.
ನೋಟ್ ನಿಷೇಧದ ನಂತರ ಬ್ಯಾಂಕ್ ಗಳಲ್ಲಿ 2.89 ಲಕ್ಷ ಕೋಟಿ ನಗದು ಜಮೆ ಮಾಡಿದ 9.72 ಲಕ್ಷ ಮಂದಿಯ ಖಾತೆಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಇಷ್ಟು ಮೊತ್ತದ ಠೇವಣಿಯನ್ನು 12.33 ಲಕ್ಷ ಖಾತೆಗಳ ಮೂಲಕ ಜಮೆ ಮಾಡಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2016-17ನೇ ಸಾಲಿನ ವಾರ್ಷಿಕ ವರದಿ ಪ್ರಕಟಿಸಿದ ಮಾರನೇ ದಿನವೇ ಆದಾಯ ತೆರಿಗೆ ಇಲಾಖೆ ಈ ಮಾಹಿತಿ ನೀಡಿರುವುದು ವಿಶೇಷ. ಕಳೆದ ವರ್ಷ ನವೆಂಬರ್ ನಲ್ಲಿ 500 ಹಾಗೂ 1000 ರುಪಾಯಿ ಮುಖಬೆಲೆಯ ನೋಟ್ ಗಳನ್ನು ನಿಷೇಧಿಸಿದ ನಂತರ ಶೇ,99ರಷ್ಟು ನೋಟ್ ಗಳು ವಾಪಸ್ ಬಂದಿವೆ ಎಂದು ನಿನ್ನೆಯಷ್ಟೇ ಆರ್ ಬಿಐ ಹೇಳಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com