2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ಶುಲ್ಕ ಇಲ್ಲ!

ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ.
ಡಿಜಿಟಲ್ ಪೇಮೆಂಟ್
ಡಿಜಿಟಲ್ ಪೇಮೆಂಟ್
ನವದೆಹಲಿ: ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ 2,000 ರೂಪಾಯಿಗಳವರೆಗಿನ ಡೆಬಿಟ್ ಕಾರ್ಡ್ ವಹಿವಾಟಿಗೆ ವಿಧಿಸಲಾಗುವ ಶುಲ್ಕವನ್ನು ರದ್ದುಗೊಳಿಸಿದೆ. 
2000 ರೂಪಾಯಿ ವರೆಗಿನ ಎಲ್ಲಾ ಡೆಬಿಟ್ ಕಾರ್ಡ್/ಭೀಮ್ ಯುಪಿಐ/ಎಇಪಿಎಸ್ ವಹಿವಾಟುಗಳಿಗೆ ಎಂಡಿಆರ್ ಶುಲ್ಕವನ್ನು ತೆಗೆದುಹಾಕಲಾಗಿದೆ ಎಂದು ಕೇಂದ್ರ ಸರ್ಕಾರ ಘೋಷಿಸಿದ್ದು, ಈ ಮೊತ್ತಕ್ಕೆ ವಿಧಿಸಲಾಗುತ್ತಿದ್ದ ಎಂಡಿಆರ್ ನ್ನು ಜ.1 ರಿಂದ ಕೇಂದ್ರ ಸರ್ಕಾರವೇ ಭರಿಸಲು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 
ಡಿಜಿಟಲ್ ಪೇಮೆಂಟ್ ಗಳನ್ನು ಉತ್ತೇಜಿಸುವುದಕ್ಕೆ ಸಣ್ಣ ಹಾಗೂ ಬೃಹತ್ ವ್ಯಾಪಾರಿಗಳಿಗೆ ಆರ್ ಬಿಐ ಎಂಡಿಆರ್ ದರಗಳನ್ನು ವಿಧಿಸಿತ್ತು. ಈ ಪ್ರಕಾರ ಪ್ರತಿ ಪಿಒಎಸ್ ಅಥವಾ ಆನ್ ಲೈನ್ ವಹಿವಾಟಿಗೆ 200 ರೂಪಾಯಿಗಳಷ್ಟು ಮಿತಿಯಲ್ಲಿ ವಾರ್ಷಿಕ 20 ಲಕ್ಷ ವಹಿವಾಟು ನಡೆಸುವವರಿಗೆ ಶೇ.0.40 ಯಷ್ಟು ಎಂಡಿಆರ್ ಶುಲ್ಕ ವಿಧಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com