ಆಧಾರ್ ಆಧಾರಿತ ಸಿಮ್ ಪರಿಶೀಲನೆ ನಿಲ್ಲಿಸಿ: ಭಾರತ್ ಏರ್ಟೆಲ್, ಪೇಮೆಂಟ್ಸ್ ಬ್ಯಾಂಕ್ ಗೆ ಯುಐಡಿಎಐ ಸೂಚನೆ

ಭಾರತಿ ಏರ್ಟೆಲ್ ಮತ್ತು ಪೇಮೆಂಟ್ಸ್ ಬ್ಯಾಂಕ್ ನ ಆಧಾರ್ ಆಧಾರಿತ ಸಿಮಿ ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತಿ ಏರ್ಟೆಲ್ ಮತ್ತು ಪೇಮೆಂಟ್ಸ್ ಬ್ಯಾಂಕ್ ನ ಆಧಾರ್ ಆಧಾರಿತ ಸಿಮಿ ಪರಿಶೀಲನೆಗೆ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಶನಿವಾರ ತಾತ್ಕಾಲಿಕ ತಡೆ ನೀಡಿದೆ.
ತನ್ನ ಗ್ರಾಹಕರಿಗೆ ಮಾಹಿತಿ ನೀಡದೆ ಭಾರತಿ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ಆರಂಭಿಸುತ್ತಿದೆ ಎಂಬ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಯುಐಡಿಎಐ ಈ ಕ್ರಮ ತೆಗೆದುಕೊಂಡಿದ್ದು, ತಕ್ಷಣದಿಂದ ಇಕೆವೈಸಿ ಹಾಗೂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರ ಕೆವೈಸಿ ಪ್ರಕ್ರಿಯೆಯನ್ನು ಸ್ಥಗತಿಗೊಳಿಸುವಂತೆ ಸೂಚಿಸಿದೆ.
ಯುಐಡಿಎಐ ತನ್ನ ಮಧ್ಯಂತ ಆದೇಶದಲ್ಲಿ ತಕ್ಷದಿಂದ ಜಾರಿಗೆ ಬರುವಂತೆ ಭಾರತಿ ಏರ್ಟೆಲ್ ಲಿಮಿಟೆಡ್ ನ ಇ-ಕೆವೈಸಿ ಪರವಾನಗಿ ಮತ್ತು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ನ ಪರವಾನಗಿಯನ್ನು ಅಮಾನತುಗೊಳಿಸಿದೆ.
ಯುಐಡಿಎಐನ ಈ ಆದೇಶದಿಂದಾಗಿ ಆಧಾರ್ ಅನ್ನು ಮೊಬೈಲ್ ಸಂಖ್ಯೆ ಲಿಂಕ್ ಮಾಡಲು ಮತ್ತು ಎಲೆಕ್ಟ್ರಾನಿಕ್ ಪರಿಶೀಲನೆ ನಡೆಸಲು ಸಾಧ್ಯವಾಗುವುದಿಲ್ಲ. ಅಲ್ಲದೆ ಗ್ರಾಹಕರು ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ಖಾತೆಯನ್ನು ಆರಂಭಿಸಲು ಸಾಧ್ಯವಾಗುವುದಿಲ್ಲ.
ಆಧಾರ್‌ ಕಾಯ್ದೆ ಉಲ್ಲಂಘನೆ ಆರೋಪದ ಕುರಿತು ಭಾರ್ತಿ ಏರ್‌ಟೆಲ್‌ ವಿರುದ್ಧ ಪ್ರಾಧಿಕಾರ ಕಳೆದ ತಿಂಗಳು ತನಿಖೆಗೆ ಆದೇಶಿಸಿತ್ತು. ಮೊಬೈಲ್‌ ಗ್ರಾಹಕರ ಇ-ಕೆವೈಸಿ ಪ್ರಕ್ರಿಯೆಯನ್ನೇ ಬಳಸಿ ಗ್ರಾಹಕರಿಗೆ ಅರಿವಿಲ್ಲದಂತೆ ಅವರ ಹೆಸರಿಗೆ ಪೇಮೆಂಟ್‌ ಬ್ಯಾಂಕ್‌ ಖಾತೆಗಳನ್ನು ತೆರೆಯುತ್ತಿರುವ ಬಗ್ಗೆ ದೂರು ನೀಡಲಾಗಿತ್ತು. ತಕ್ಷಣದಿಂದಲೇ ಈ ಅಕ್ರಮ ನಿಲ್ಲಿಸದಿದ್ದರೆ ಭಾರೀ ಪ್ರಮಾಣದ ದಂಡ ತೆರಬೇಕಾದೀತು ಎಂದು ಯುಐಡಿಎಐ ಭಾರ್ತಿ ಏರ್‌ಟೆಲ್‌ಗೆ ಎಚ್ಚರಿಕೆ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com