ಅನಾಣ್ಯೀಕರಣದ ನಂತರವೂ ಅಧಿಕ ಮುಖಬೆಲೆಯ ನೋಟುಗಳು ಹೆಚ್ಚು ಚಲಾವಣೆಯಲ್ಲಿ

ನಂಬಲಸಾಧ್ಯವಾದರೂ ಇದು ಸತ್ಯ. ನೋಟುಗಳ ಅನಾಣ್ಯೀಕರಣದ ನಂತರ ಅಧಿಕ ಮೌಲ್ಯದ ನೋಟುಗಳ ಚಲಾವಣೆ ದೇಶದಲ್ಲಿ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ನಂಬಲಸಾಧ್ಯವಾದರೂ ಇದು ಸತ್ಯ. ನೋಟುಗಳ ಅನಾಣ್ಯೀಕರಣದ ನಂತರ ಅಧಿಕ ಮೌಲ್ಯದ ನೋಟುಗಳ ಚಲಾವಣೆ ದೇಶದಲ್ಲಿ ಒಟ್ಟಾರೆ ನೋಟು ಚಲಾವಣೆಯಲ್ಲಿ ಶೇಕಡಾ 93ರಷ್ಟಿದೆ. ನೋಟುಗಳ ಅನಾಣ್ಯೀಕರಣಕ್ಕೆ ಮೊದಲು ಅಧಿಕ ಮೌಲ್ಯ ನೋಟುಗಳ ಚಲಾವಣೆ ಶೇಕಡಾ 86.4ರಷ್ಟಿದ್ದರೆ, ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅಧಿಕ ಮೌಲ್ಯದ ನೋಟುಗಳ ಚಲಾವಣೆ ಶೇಕಡಾ 90ರ ಗಡಿ ದಾಟಿದೆ.
ಕಳೆದ ಡಿಸೆಂಬರ್ 8ರಂದು ದೇಶದಲ್ಲಿ ಒಟ್ಟಾರೆ ಕರೆ ನ್ಸಿಗಳ ಚಲಾವಣೆ 16,82,510 ಕೋಟಿ ರೂಪಾಯಿಗಳಿದ್ದವು. ಕಳೆದ ವಾರ ಹಣಕಾಸು ಇಲಾಖೆ ಸಂಸತ್ತಿನಲ್ಲಿ ನೀಡಿದ ಮಾಹಿತಿ ಪ್ರಕಾರ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 8ರಂದು 2000 ಮತ್ತು 500 ರೂಪಾಯಿಗಳ 15,78,700 ಕೋಟಿ ಮೌಲ್ಯದ ನೋಟುಗಳನ್ನು ಆರ್ ಬಿಐ ಮುದ್ರಣ ಮಾಡಿದೆ. ಚಲಾವಣೆಯಾದ ನೋಟುಗಳ ಪ್ರಮಾಣ ಶೇಕಡಾ 97.
ನೋಟುಗಳ ನಿಷೇಧದ ನಂತರವೂ ಅಧಿಕ ಮೌಲ್ಯದ ನೋಟುಗಳ ಮೇಲೆ ಜನರು ಹೆಚ್ಚು ಅವಲಂಬಿತವಾಗಿರುವುದನ್ನು ಕಂಡಿರುವ ಆರ್ ಬಿಐ, ಎಲ್ಲಾ ಮುಖಬೆಲೆಯ ನೋಟುಗಳ ಚಲಾವಣೆ ಸಹಜ ಸ್ಥಿತಿಗೆ ಬರಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಈ ನಿಟ್ಟಿನಲ್ಲಿ ಆರ್ ಬಿಐ ಕಾರ್ಯಪ್ರವೃತ್ತವಾಗಿದೆ. ಮುದ್ರಣಗೊಂಡ ನೋಟುಗಳಲ್ಲಿ ಶೇಕಡಾ 16ರಷ್ಟನ್ನು ಆರ್ ಬಿಐ ಇನ್ನು ಕೂಡ ಪೂರೈಸಿಲ್ಲ ಎನ್ನುತ್ತಾರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಆರ್ಥಿಕ ಸಲಹೆಗಾರ ಡಾ. ಸೌಮ್ಯ ಕಾಂತಿ ಘೋಷ್.
ಈ ಬಗ್ಗೆ ಆರ್ ಬಿಐ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಮೂಲಗಳಿಂದ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಸಿಕ್ಕಿರುವ ಮಾಹಿತಿ ಪ್ರಕಾರ, 2000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳ ಚಲಾವಣೆ ಶೇಕಡಾ 90ರಷ್ಟು ಮತ್ತು ಇತರ ಕಡಿಮೆ ಮುಖಬೆಲೆಯ ನೋಟುಗಳ ಚಲಾವಣೆ ಶೇಕಡಾ 10ರಷ್ಟಿದೆ.
ಆದರೆ ಇಲ್ಲಿ ಮೂಡುವ ಸಂದೇಹ, ಕೇಂದ್ರ ಸರ್ಕಾರ 2,000 ಮುಖಬೆಲೆಯ ನೋಟನ್ನು ನಿಧಾನವಾಗಿ ಚಲಾವಣೆಯಿಂದ ಹಿಂತೆಗೆದುಕೊಳ್ಳಲು ಆರಂಭಿಸುತ್ತದೆಯೇ ಎಂಬುದು. ಮಾರ್ಚ್ 2017ರ ಹೊತ್ತಿಗೆ 2,000 ಮುಖಬೆಲೆಯ 3.2 ಶತಕೋಟಿ ನೋಟುಗಳು ಚಲಾವಣೆಯಲ್ಲಿದ್ದವು. ಡಿಸೆಂಬರ್ ನಲ್ಲಿ ಹಣಕಾಸು ಇಲಾಖೆಯ ಅಂಕಿಅಂಶ ಪ್ರಕಾರ ಮುದ್ರಣಗೊಂಡ ನೋಟುಗಳ ಸಂಖ್ಯೆ ಶೇಕಡಾ 11ರಷ್ಟು ಜಾಸ್ತಿಯಾಗಿದೆಯಷ್ಟೆ. 500 ರೂ ಮುಖಬೆಲೆಯ ನೋಟುಗಳ ಚಲಾವಣೆ ಮಾರ್ಚ್ ನಿಂದ ಡಿಸೆಂಬರ್ ವರೆಗೆ ಶೇಕಡಾ 188ರಷ್ಟು ಜಾಸ್ತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com