ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಸಿಇಓ ಸ್ಥಾನಕ್ಕೆ ಶಶಿ ಅರೋರಾ ರಾಜೀನಾಮೆ

ಭಾರತಿ ಏರ್ ಟೆಲ್ ಆಧಾರ್-ಸಂಬಂಧಿತ ಇ-ಕೆವೈಸಿ ಪರಿಶೀಲನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ,......
ಶಶಿ ಅರೋರಾ
ಶಶಿ ಅರೋರಾ
ನವದೆಹಲಿ: ಭಾರತಿ ಏರ್ ಟೆಲ್ ಆಧಾರ್-ಸಂಬಂಧಿತ ಇ-ಕೆವೈಸಿ ಪರಿಶೀಲನೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಅಮಾನತುಗೊಳಿಸಿದ ಹಿನ್ನೆಲೆಯಲ್ಲಿ, ಏರ್ ಟೆಲ್ ಪೇಮೆಂಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಶಶಿ ಅರೋರಾ ತನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಸಂಸ್ಥೆಯು ಶಶಿ ಅವರನ್ನು ವಜಾ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದು ಅವರು, ಏರ್ ಟೆಲ್ ನ ಬಾಹ್ಯ ವ್ಯವಹಾರಗಳನ್ನು ಮುಂದುವರಿಸಲಿದ್ದಾರೆ ಎಂದು ಸಂಸ್ಥೆ ಸಂಬಂಧಿತ ವರದಿ ತಿಳಿಸಿದೆ.ಇದೇ ಸಮಯದಲ್ಲಿ ಶಶಿ ಅವರ ಕೊಡುಗೆ ಮತ್ತು ಬದ್ಧತೆಯನ್ನು ಏರ್ ಟೆಲ್ ಶ್ಲಾಘಿಸಿದೆ.
ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನ ಪ್ರಧಾನ ವ್ಯವಸ್ಥಾಪಕ ಮತ್ತು ಸಿಇಒ ಆಗಿ ಕಾರ್ಯನಿರ್ವಹಿಸುವ ಮೊದಲು, ಶಶಿ ಏರ್ ಟೆಲ್ ಡಿಟಿಎಚ್ ನ ಸಿಇಒ ಆಗಿಯೂ ಕೆಲಸ ಮಾಡಿದ್ದರು. ಅಲ್ಲದೆ ಅವರು ದೆಹಲಿ ಹಾಗು ಉತ್ತರ ಟೆಲಿಕಾಂ  ವಲಯದ  ಸಿಇಓ ಆಗಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com