2015-16ರಲ್ಲಿ ಕೇವಲ ಶೇ.1.7 ಭಾರತೀಯರಿಂದ ಆದಾಯ ತೆರಿಗೆ ಪಾವತಿ

ದೇಶದ 120 ಕೋಟಿ ಜನರ ಪೈಕಿ 2015-16ನೇ ಸಾಲಿನ ಮೌಲ್ಯಮಾಪನ ವರ್ಷ(assessment year)ದಲ್ಲಿ ಕೇವಲ 2 ಕೋಟಿ ಅಥವಾ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದ 120 ಕೋಟಿ ಜನರ ಪೈಕಿ 2015-16ನೇ ಸಾಲಿನ ಮೌಲ್ಯಮಾಪನ ವರ್ಷ(assessment year)ದಲ್ಲಿ ಕೇವಲ 2 ಕೋಟಿ ಅಥವಾ ಶೇ.1.7ರಷ್ಟು ಭಾರತೀಯರು ಮಾತ್ರ ಆದಾಯ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ದಾಖಲೆಗಳಿಂದ ಬಹಿರಂಗವಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಪ್ರಮಾಣ 2015-16ನೇ ಸಾಲಿನಲ್ಲಿ 4.07 ಕೋಟಿಗೆ ಏರಿಕೆಯಾಗಿದೆ. ಈ ಪೈಕಿ 2.06 ಕೋಟಿ ತೆರಿಗೆದಾರರು ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ಉಳಿದವರು ತಮ್ಮ ಆದಾಯ ಮಿತಿಯೊಳಗಿದೆ ಎಂದು ಘೋಷಿಸಿಕೊಂಡಿದ್ದಾರೆ.
2014-15ನೇ ಸಾಲಿನಲ್ಲಿ ಒಟ್ಟು 3.65 ಕೋಟಿ ತೆರಿಗೆ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಈ ಪೈಕಿ 1.91 ಕೋಟಿ ತೆರಿಗೆದಾರರು ಮಾತ್ರ ಆದಾಯ ತೆರಿಗೆ ಪಾವತಿಸಿದ್ದಾರೆ. ಉಳಿದವರು ತಮ್ಮ ಆದಾಯ ಮಿತಿಯೊಳಗಿದೆ ಎಂದು ಘೋಷಿಸಿಕೊಂಡಿದ್ದಾರೆ.
2015-16ನೇ ಸಾಲಿನಲ್ಲಿ ವೈಯಕ್ತಿಕ ಆದಾಯ ತೆರಿಗೆ ಪಾವತಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1.88 ಲಕ್ಷ ಮಂದಿ ಮಾತ್ರ ತೆರಿಗೆ ಪಾವತಿಸಿದ್ದಾರೆ. 2014-15ರಲ್ಲಿ 1.91 ಲಕ್ಷ ತೆರಿಗೆದಾರರು ತೆರಿಗೆ ಪಾವತಿಸಿದ್ದರು.
ದೇಶದ ಒಟ್ಟು 120 ಕೋಟಿ ಜನಸಂಖ್ಯೆಯ ಪೈಕಿ ಕೇವಲ ಶೇ.3ರಷ್ಟು ಅಥವಾ 2.01 ಕೋಟಿ ಭಾರತೀಯರು ಮಾತ್ರ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದು, 9.690 ಮಂದಿ ಒಂದು ಕೋಟಿ ರುಪಾಯಿಗೂ ಅಧಿಕ ತೆರಿಗೆ ಪಾವತಿ ಮಾಡಿದ್ದಾರೆ ಎಂದು ಕಳೆದ ವಾರ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com