ಪ್ರತಿ ತಿಂಗಳು ಎಲ್ ಪಿಜಿ ದರ ಏರಿಕೆ ಪದ್ಧತಿಗೆ ಗುಡ್ ಬೈ ಹೇಳಲಿರುವ ಕೇಂದ್ರ ?

ಪ್ರತಿ ತಿಂಗಳೂ ಎಲ್ ಪಿ ಜಿ ದರ ಏರಿಕೆ ಮಾಡುವ ಪದ್ಧತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವ ಸಾಧ್ಯತೆ ಇದೆ.
ಎಲ್ ಪಿಜಿ
ಎಲ್ ಪಿಜಿ
ನವದೆಹಲಿ: ಪ್ರತಿ ತಿಂಗಳೂ ಎಲ್ ಪಿ ಜಿ ದರ ಏರಿಕೆ ಮಾಡುವ ಪದ್ಧತಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸುವ ಸಾಧ್ಯತೆ ಇದೆ. 
17 ತಿಂಗಳು ಸತತವಾಗಿ ಎಲ್ ಪಿಜಿ ದರ ಏರಿಕೆ ಮಾಡಿರುವ ರಾಷ್ಟ್ರೀಯ ತೈಲ ಕಂಪನಿಗಳು, ಕಳೆದ ತಿಂಗಳಿನಿಂದ ಮಾಸಿಕ ಪರಿಷ್ಕರಣೆಯನ್ನು ನಿಲ್ಲಿಸಿದ್ದು, ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.  2018 ರ ವೇಳೆಗೆ ಅನಿಲ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದುಹಾಕುವ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇದ್ದ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಭಾರತೀಯ ಆಯಿಲ್ ಕಾರ್ಪ್(ಐಒಸಿ), ಭಾರತ್ ಪೆಟ್ರೋಲಿಯಂ ಕಾರ್ಪ್ ಲಿ. (ಬಿಪಿಸಿಎಲ್) ಹಾಗೂ ಹಿಂದೂಸ್ಥಾನ್ ಪೆಟ್ರೋಲಿಯಮ್ ಕಾರ್ಪ್ ಲಿ. (ಹೆಚ್ ಪಿಸಿಎಲ್ ) ಕಳೆದ ವರ್ಷ ಜುಲೈ ನಿಂದ ಎಲ್ ಪಿಜಿ ದರವನ್ನು ಪ್ರತಿ ತಿಂಗಳು ಏರಿಕೆ ಮಾಡುತ್ತಿದ್ದವು. ನ.1 ರಂದು 4.50 ರೂಪಾಯಿ ಏರಿಕೆ ಮಾಡಿದ್ದು ಇತ್ತೀಚಿನ ದರ ಎರಿಕೆಯಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com