ಬ್ಯಾಡ್ ಲೋನ್ ಗಳ ಪ್ರಮಾಣ ಶೇ.9.6 ರಷ್ಟಾಗಿದ್ದು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಗೆ ಮರುಬಂಡವಾಳ ತೊಡಗಿಸುವ ಪ್ರಕ್ರಿಯೆಗೆ ಆರ್ ಬಿಐ ಗೌರ್ನರ್ ಉರ್ಜಿತ್ ಪಟೆಲ್ ಕರೆ ನೀಡಿದ್ದರು. ಅದರಂತೆಯೇ ಸರ್ಕಾರ ಸಹ ಮರು ಬಂಡವಾಳ ಹೂಡಿಕೆಗೆ ಸರ್ಕಾರ ಒಪ್ಪಿಗೆ ಸೂಚಿಸಿದ್ದು, ಭಾರತ ಸರಕಾರ ಒಂದು ಲಕ್ಷ ಮೂವತ್ತೈದು ಸಾವಿರ ಕೋಟಿ ರೂಪಾಯಿಯನ್ನ ಬ್ಯಾಂಕ್ ರಿ ಕ್ಯಾಪಿಟಲೈಸೇಶನ್ ಬಾಂಡ್ ಬಿಡುಗಡೆ ಮಾಡಿ ಉಳಿದ 58,000 ಕೋಟಿ ರೂಪಾಯಿಯನ್ನು ಕ್ಯಾಪಿಟಲ್ ಮಾರ್ಕೆಟ್ ನಿಂದ ಸಂಗ್ರಹಿಸಲು ತೀರ್ಮಾನಿಸಿತ್ತು. ವಿಜಯ್ ಮಲ್ಯಾರಂತಹ ಉದ್ಯಮಿಗಳು ಸಾಲ ತೆಗೆದುಕೊಂಡು ವಾಪಸ್ ನೀಡಲಾಗದೇ ಇದ್ದಾಗ ಬ್ಯಾಂಕ್ ನಷ್ಟ ಎದುರಿಸಿ, ಜನತೆ ಬ್ಯಾಂಕಿಂಗ್ ಕ್ಷೇತ್ರದ ಮೇಲೆ ಭರವಸೆ ಕಳೆದುಕೊಳ್ಳದಂತೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಈ ಕ್ರಮ ಮಹತ್ವ ಪಡೆದುಕೊಂಡಿತ್ತು.