ಪೇಟಿಎಂ ಆನ್ ಲೈನ್ ನಲ್ಲಿ ಶೇ.40 ರಷ್ಟು ಆಲಿಬಾಬ ಪಾಲುದಾರಿಕೆ

ಚೀನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬ ಪೇಟಿಎಂ ನಲ್ಲಿ 1,700 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಶೇ.40 ರಷ್ಟು ಪಾಲನ್ನು ಪಡೆಯಲು ಚಿಂತನೆ ನಡೆಸುತ್ತಿದೆ.
ಆಲಿಬಾಬ
ಆಲಿಬಾಬ
ಮುಂಬೈ: ಚೀನಾದ ಇ-ಕಾಮರ್ಸ್ ಸಂಸ್ಥೆ ಅಲೀಬಾಬ ಪೇಟಿಎಂ ನಲ್ಲಿ 1,700 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಶೇ.40 ರಷ್ಟು ಪಾಲನ್ನು ಪಡೆಯಲು ಚಿಂತನೆ ನಡೆಸುತ್ತಿದೆ. 
ಆನ್ ಲೈನ್ ಪಾವತಿಗೆ ಬಳಕೆಯಾಗುತ್ತಿರುವುದರ ಪೈಕಿ ಪೇಟಿಎಂ ಮುಂಚೂಣಿಯಲ್ಲಿದ್ದು, ಅಲೀಬಾಬದ ಆನ್ ಲೈನ್ ಪಾವತಿ ಸಂಸ್ಥೆಗಳಾಗಿರುವ ಆಲಿ ಪೇ, ಹೂಡಿಕೆ ಸಂಸ್ಥೆ ಎಸ್ಎಐಎಫ್ ಸಹ ಪೆಟಿಎಂ ನಲ್ಲಿ ಪಾಲು ಪಡೆಯುವ ಪ್ರಕ್ರಿಯೆಯಲ್ಲಿ ಭಾಗಿಯಾಗಲಿವೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.
ಪೇಟಿಎಂ ನ ಮಾತೃಸಂಸ್ಥೆ ಒನ್97 (One97) ಕಮ್ಯುನಿಕೇಷನ್ಸ್ ನ ಶೇ.20ರ ಷ್ಟು ಆದಾಯ ( 1 ಬಿಲಿಯನ್ ಡಾಲರ್) ವನ್ನು ಆಲೀಬಾಬ ಪಡೆಯಲಿದೆ ಎಂದು ಮಿಂಟ್ ವರದಿ ಮಾಡಿದೆ. ಆಲೀಬಾಬ ಶೇ.40 ರಷ್ಟು ಪಾಲುದಾರಿಕೆ ಹೊಂದಿದ ನಂತರ ಪೇಟಿಎಂ ಇ-ಕಾಮರ್ಸ್ ಎಂಬ ಹೊಸ ಸಂಸ್ಥೆ ಪ್ರಾರಂಭವಾಗಲಿದ್ದು, ಆಲೀ ಪೇ ಹಾಗೂ ಆಲಿಬಾಬ ಪೇಟಿಎಂ ನಲ್ಲಿ ಒಟ್ಟು ಶೇ.50 ರಷ್ಟು ಪಾಲುದಾರಿಕೆ ಹೊಂದಲಿವೆ. 
ಒಮ್ಮೆ ಒಪ್ಪಂದ ನಡೆದ ಬಳಿಕ, ಹೊಸ ಆಪ್ ಹಾಗೂ ಹೊಸ ವೆಬ್ ಸೈಟ್ ಗಳಲ್ಲಿ ಆಲೀಬಾಬದ ಟಿ-ಮಾಲ್ ಹಾಗೂ ಪೇಟಿಎಂ ಒಗ್ಗೂಡಿ ಪೇಟಿಎಂ ಮಾಲ್ ಅಥವಾ ಪೇಟಿಎಂ ಬಜಾರ್ ಹೆಸರಿನ ಸಂಸ್ಥೆಗಳು ಕಾರ್ಯನಿರ್ವಹಿಸಲಿದೆ ಎಂದು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ. ಕೆಲವೇ ವಾರಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com