ಬ್ಯಾಂಕ್ ಆಫ್ ಅಮೇರಿಕಾ ಮೆರಿಲ್ ಲಿಂಚ್ ನೋಟು ನಿಷೆಧದ ಬಗ್ಗೆ ಸಮೀಕ್ಷೆ ನಡೆಸಿದ್ದು, ಸಮೀಕ್ಷೆಗೊಳಪಟ್ಟ 2,000 ಜನರ ಪೈಕಿ ಶೇ.60 ರಷ್ಟು ಜನರು ನೋಟು ನಿಷೇಧದಿಂದ ಪರಿಣಾಮ ಎದುರಿಸಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದೆ. ನೋಟು ನಿಷೇಧದಿಂದ ಉಂಟಾದ ಪರಿಣಾಮವನ್ನು ಅಭಿವೃದ್ಧಿಯ ಚಾಲನೆಗೆ ಪೂರಕವಾಗುವಂತೆ ಬಡ್ಡಿ ದರ (ರೆಪೋ ದರ) ಕಡಿಮೆ ಮಾಡಬೇಕೆಂದು ಬ್ಯಾಂಕ್ ಹಾಗೂ ಕೈಗಾರಿಕೆಗಳು ಹೇಳಿದ್ದು, ಹಣಕಾಸು ನೀತಿ ಪ್ರಕಟಿಸಲಿರುವ ಉರ್ಜಿತ್ ಪಟೇಲ್ ರೆಪೋ ದರ ಕಡಿಮೆ ಮಾಡುವ ನಿರೀಕ್ಷೆ ಇದೆ.