ಶೀಘ್ರದಲ್ಲೆ ಮೊಬೈಲ್ ಆಪ್ ಮೂಲಕ ನೀವು ಆದಾಯ ತೆರಿಗೆ ಪಾವತಿಸಬಹುದು

ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಾಥ್ ನೀಡಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ,....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನವದೆಹಲಿ: ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ಸಾಥ್ ನೀಡಲು ಮುಂದಾಗಿರುವ ಆದಾಯ ತೆರಿಗೆ ಇಲಾಖೆ, ಜನರು ತಮ್ಮ ಸ್ಮಾರ್ಟ್ ಫೋನ್ ಮೂಲಕ ಆದಾಯ ತೆರಿಗೆಯನ್ನು ಪಾವತಿಸಲು ಅಥವಾ ಪಾನ್ ಕಾರ್ಡ್ ಪಡೆಯಲು ಸಹಕಾರಿಯಾಗುವಂತೆ ಹೊಸ ಆಪ್ ಅಭಿವೃದ್ಧಿಪಡಿಸುತ್ತಿದೆ.
ಆಧಾರ್ ಕಾರ್ಡ್ ಹಾಗೂ ಇ-ಕೆವೈಸಿ ಬಳಸಿ ಕೆಲವೇ ನಿಮಿಷಗಳಲ್ಲಿ ಪಾನ್ ಅರ್ಜಿಯನ್ನು ಪರಿಶೀಲಿಸಿ ಪಾನ್ ನಂಬರ್ ನೀಡುವ ಯೋಜನೆ ಮೇಲೆ ಕೆಲಸ ನಡೆಯುತ್ತಿದ್ದು, ಇದು ಜನ ಅತಿ ಸುಲಭವಾಗಿ ಹಾಗೂ ಅತಿ ಬೇಗ ತಮ್ಮ ಪಾನ್ ಕಾರ್ಡ್ ಅನ್ನು ಪಡೆದುಕೊಳ್ಳಲು ಸಹಕಾರಿಯಾಗಲಿದೆ.
ಸದ್ಯ ಆಪ್ ಪರಿಕಲ್ಪನೆ ಪ್ರಾಥಮಿಕ ಹಂತದಲ್ಲಿದ್ದು, ಹಣಕಾಸು ಸಚಿವಾಲಯದ ಒಪ್ಪಿಗೆ ಪಡೆದ ನಂತರ ಯೋಜನೆಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಳ್ಳಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಕಾರ 50 ಸಾವಿರಕ್ಕಿಂತ ಹೆಚ್ಚು ಹಣ ಡ್ರಾ ಮಾಡಲು ಮತ್ತು 2 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಖರೀದಿಗೆ ಪಾನ್ ಕಡ್ಡಾಗೊಳಿಸಿದೆ. ಹೀಗಾಗಿ ದೇಶಾದ್ಯಂತ ಪ್ರತಿ ವರ್ಷ 2.5 ಕೋಟಿ ಜನ ಪಾನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುತ್ತಿದ್ದು, ಈಗಾಗಲೇ 25 ಕೋಟಿ ಜನ ಪಾನ್ ಕಾರ್ಡ್ ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com