ನವದೆಹಲಿ: ವಿನಿಮಯ ಸಂಸ್ಥೆಗಳಲ್ಲಿ ಮತ್ತು ಠೇವಣಿಗಳಲ್ಲಿ ಪ್ರಾಥಮಿಕ ಮಾರುಕಟ್ಟೆಗಳ ಮೂಲಕ ಷೇರುಗಳನ್ನು ಪಡೆಯಲು ವಿದೇಶಿ ಹೂಡಿಕೆದಾರರಿಗೆ ಷೇರು ಮಾರುಕಟ್ಟೆ ಪ್ರಾಧಿಕಾರ ಸೆಬಿ ಅವಕಾಶ ನೀಡಿದೆ.
ಇದಕ್ಕಿಂತ ಮುನ್ನ ವಿದೇಶಿ ಹೂಡಿಕೆದಾರರು ಠೇವಣಿದಾರರ ಮತ್ತು ವಿನಿಮಯ ಸಂಸ್ಥೆಗಳ ಷೇರುಗಳನ್ನು ದ್ವಿತೀಯ ಮಾರುಕಟ್ಟೆ ಮೂಲಕ ಮಾತ್ರ ಪಡೆಯಬಹುದಾಗಿತ್ತು.
ಕೇಂದ್ರ ಡಿಪಾಸಿಟರಿ ಸೇವೆಗಳ ಲಿಮಿಟೆಡ್ ಇಪಿಒ(ಇನೀಷಿಯಲ್ ಪಬ್ಲಿಕ್ ಆಫರಿಂಗ್) ನ್ನು ಆರಂಭಿಸಲು ತಯಾರು ಮಾಡುತ್ತಿರುವ ಸಂದರ್ಭದಲ್ಲಿ ಈ ನಡೆ ಕಂಡುಬಂದಿದೆ.
ನಿಯಮ ಪ್ರಕಾರ, ಠೇವಣಿ ಮತ್ತು ವಿನಿಮಯ ಸಂಸ್ಥೆಗಳಲ್ಲಿ ಶೇಕಡಾ 49ರಷ್ಟು ವಿದೇಶಿ ಹೂಡಿಕೆಯಿರಬಹುದು. ಇದೀಗ ಸೆಬಿ, ಷೇರು ಮಾರುಕಟ್ಟೆ ಮತ್ತು ವಿನಿಮಯ ಸಂಸ್ಥೆಗಳ ಕಾನೂನು ಕ್ರಮಗಳಿಗೆ ತಿದ್ದುಪಡಿ ತಂದಿದೆ.