16,000 ಕೋಟಿ ರು. ಮೌಲ್ಯದ ಷೇರು ಮರು ಖರೀದಿಗೆ ಟಿಸಿಎಸ್ ಮಂಡಳಿ ಒಪ್ಪಿಗೆ

ಭಾರತೀಯ ಷೇರು ಮಾರುಕಟ್ಟೆಯಲ್ಲಿರುವ 16,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮರು ಖರೀದಿ(ಬೈ ಬ್ಯಾಕ್) ಮಾಡಲು....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರತೀಯ ಷೇರು ಮಾರುಕಟ್ಟೆಯಲ್ಲಿರುವ 16,000 ಕೋಟಿ ರುಪಾಯಿ ಮೌಲ್ಯದ ಷೇರುಗಳನ್ನು ಮರು ಖರೀದಿ(ಬೈ ಬ್ಯಾಕ್) ಮಾಡಲು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ನಿರ್ದೇಶಕ ಮಂಡಳಿ ಸೋಮವಾರ ಒಪ್ಪಿಗೆ ನೀಡಿದೆ. 
ತಲಾ 2,850 ರು. ದರದಲ್ಲಿ ಒಟ್ಟು 16,000 ಕೋಟಿ ರು. ಮೌಲ್ಯದ 5.61 ಕೋಟಿ ಶೇರುಗಳನ್ನು ತನ್ನ ಶೇರುದಾರರಿಂದು ಮರು ಖರೀದಿಸುವ ಯೋಜನೆಗೆ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿರುವುದಾಗಿ ಇಂದು ಟಿಸಿಎಸ್ ಘೋಷಿಸಿದೆ.
ಟಿಸಿಎಸ್ ನಿರ್ದೇಶಕ ಮಂಡಳಿ ಬೈ ಬ್ಯಾಕ್ ಘೋಷಣೆ ಮಾಡುತ್ತಿದ್ದಂತೆ ಬಾಂಬೆ ಷೇರು ಮಾರುಕಟ್ಟೆಯಲ್ಲಿ ಟಿಸಿಎಸ್ ಷೇರುಗಳ ಮೌಲ್ಯ ಶೇಕಡಾ 4 ರಷ್ಟು ಹೆಚ್ಚಾಗಿದ್ದು 2,506 ರುಪಾಯಿಗೆ ಏರಿಕೆ ಕಂಡಿದೆ. ಇದು ಕಳೆದ ಐದು ತಿಂಗಳಲ್ಲೇ ಅತಿ ಹೆಚ್ಚು.
ಟಿಸಿಎಸ್ ನಿರ್ಗಮಿತ ಸಿಇಒ ಮತ್ತು ಎಂಡಿ ನಟರಾಜನ್ ಚಂದ್ರಶೇಖರನ್ ತಮ್ಮ ಕೊನೆಯ ದಿನದ ಅಧಿಕಾರವಧಿಯಲ್ಲಿ ಈ ಘೋಷಣೆ ಮಾಡಿದ್ದಾರೆ. ಅವರು ನಾಳೆಯಿಂದ ಟಾಟಾ ಸಮೂಹ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com