ರಿಲಯನ್ಸ್ ಜಿಯೋ: 170 ದಿನದಲ್ಲಿ 100 ಮಿಲಿಯನ್ ಗ್ರಾಹಕರು: ಏಪ್ರಿಲ್ 1ರಿಂದ ರಿಯಾಯಿತಿ ದರಗಳು!

170 ದಿನಗಳಲ್ಲಿ ರಿಲಾಯನ್ಸ್ ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 1 ರಿಂದ ಜಿಯೋ ಬಿಲ್ಲಿಂಗ್ ಸೇವೆ ..
ಜಿಯೋ
ಜಿಯೋ

ನವದೆಹಲಿ: 170 ದಿನಗಳಲ್ಲಿ ರಿಲಾಯನ್ಸ್ ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದುವಲ್ಲಿ ಯಶಸ್ವಿಯಾಗಿದೆ. ಏಪ್ರಿಲ್ 1 ರಿಂದ ಜಿಯೋ ಬಿಲ್ಲಿಂಗ್ ಸೇವೆ ಆರಂಭಗೊಳ್ಳಲಿದೆ ಎಂದು ರಿಲಾಯನ್ಸ್ ಸಂಸ್ಥೆ ಅಧ್ಯಕ್ಷ ಮುಖೇಶ್ ಅಂಬಾನಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರಂಭವಾದ ದಿನದಿಂದ ಇಲ್ಲಿಯವರೆಗೆ 170 ದಿನಗಳಾಗಿದ್ದು, ಒಟ್ಟಾರೆ 100 ಮಿಲಿಯನ್ ಗ್ರಾಹಕರನ್ನು ಜಿಯೋ ಹೊಂದಿದೆ.

ಪ್ರತಿದಿನ, ಪ್ರತಿ ಸೆಕೆಂಡಿಗೆ 7 ಮಂದಿ ಜಿಯೋ ಗ್ರಾಹಕರಾಗುತ್ತಿದ್ದಾರೆ. ಜಿಯೋ ಗ್ರಾಹಕರು ತಿಂಗಳಿಗೆ 100 ಕೋಟಿ ಜಿಬಿ ಡೇಟಾ ಬಳಕೆ ಮಾಡುತ್ತಿದ್ದಾರೆ. ತಿಂಗಳಿಗೆ 3.3 ಕೋಟಿ ಜಿಬಿಗೂ ಹೆಚ್ಚು ಡೇಟಾ ಬಳಕೆಯಾಗುತ್ತಿದೆ ಎಂದು ಹೇಳಿದ್ದಾರೆ.

ಮೊಬೈಲ್ ಡೇಟಾ ಬಳಕೆಯಲ್ಲಿ  ಭಾರತ ನಂಬರ್ 1 ಆಗುತ್ತಿದೆ. ಪ್ರತಿದಿನ ಜಿಯೋ ನೆಟ್ ವರ್ಕ್ ಸುಮಾರು 5.5 ಕೋಟಿ ಗಂಟೆಗಳ ವಿಡಿಯೋ ಕೊಂಡಯ್ಯುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ನೆಟ್ ವರ್ಕ್ ಮತ್ತಷ್ಟು ವೇಗವಾಗಿಸುತ್ತೇವೆ ಹಾಗೂ ಹೆಚ್ಚು ಸಮರ್ಥಗೊಳಿಸುತ್ತೇವೆ ಎಂದು ಅಂಬಾನಿ ವಿವರಿಸಿದ್ದಾರೆ.

ಮುಂಬರುವ ದಿನಗಳಲ್ಲಿ ದೇಶದ 99 ರಷ್ಟು ಜನಸಂಖ್ಯೆ ನಮ್ಮ ನೆಟ್ ವರ್ಕ್ ಬಳಸುತ್ತಾರೆ. ಎಲ್ಲಾ ರೀತಿಯ ಜಿಯೋ ಟ್ಯಾರಿಫ್ ಪ್ಲಾನ್ ಮತ್ತು ಎಲ್ಲಾ ಸ್ಥಳೀಯ ವಾಯ್ಸ್ ಕಾಲ್ ಗಳು ಯಾವಾಗಲೂ ಉಚಿತವಾಗಿರುತ್ತವೆ. ಆರಂಭಿಕ ಅಂದರೆ ಪ್ರೋಮೋ ಆಫರ್ ಏಪ್ರಿಲ್ 1 ರಿಂದ ಅಂತ್ಯಗೊಳ್ಳಲಿದೆ, ಜೊತೆಗೆ ಏಪ್ರಿಲ್ 1 ರಿಂದ ರೋಮಿಂಗ್ ಇರುವುದಿಲ್ಲ, ಮುಂಬರುವ ತಿಂಗಳುಗಳಲ್ಲಿ ಡೇಟಾ ಸಾಮರ್ಥ್ಯ ದ್ವಿಗುಣಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ಜಿಯೋ ಗ್ರಾಹಕ ಸ್ನೇಹಿ ಸಂಸ್ಥೆಯಾಗಿದೆ, ನಮ್ಮ ಹೂಡಿಕೆ ಹಾಗೂ ತಂತ್ರಜ್ಞಾನ ಡೇಟಾ ಸ್ಟ್ರಾಂಗ್ ನೆಟ್ ವರ್ಕ್ ಸೃಷ್ಟಿಸುತ್ತಿದೆ. ಡೇಟಾ ಡಿಜಿಟಲ್ ಲೈಫ್ ನ ಆಕ್ಸಿಜನ್ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಜಿಯೋ ಪ್ರೈಮ್ ಸದಸ್ಯರು ತಮ್ಮ ಹ್ಯಾಪಿ ನ್ಯೂ ಇಯರ್ ಪ್ಲಾನ್ ಅನ್ನು 2018ರ ವರೆಗೂ ಮುಂದುವರಿಸಿಕೊಂಡು ಹೋಗಬಹುದಾಗಿದೆ. ಮೊದಲ 100 ಮಿಲಿಯನ್ ಗ್ರಾಹಕರಿಗೆ ಪ್ರೈಮ್ ಮೆಂಬರ್ ಶಿಪ್ ಸಿಗಲಿದೆ. ಜಿಯೋ ಪ್ರೈಮ್ ಮೆಂಬರ್ಸ್ ಮಾರ್ಚ್ 31 2018 ರವರೆಗೂ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಮುಂದುವರಿಸಿಕೊಂಡು ಹೋಗಬಹುದು. ಗ್ರಾಹಕರು ಪ್ರತಿ ವರ್ಷ 99 ರು ಪಾವತಿಸಿ ಜಿಯೋ ಪ್ರೈಮ್ ಮೆಂಬರ್ ಶಿಪ್ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com