ಐಎಂಎಫ್: ಅನಾಣ್ಯೀಕರಣದಿಂದ ಭಾರತದ ಜಿಡಿಪಿ ಕುಂಠಿತ, ಈ ಹಣಕಾಸು ವರ್ಷ ಶೇಕಡಾ 6.6%

ನೋಟುಗಳ ಅಮಾನ್ಯತೆಯಿಂದ ಆರ್ಥಿಕ ಚಟುವಟಿಕೆಗಳಲ್ಲಿ ತಾತ್ಕಾಲಿಕ ಅಡ್ಡಿಯುಂಟಾಗಿದ್ದರಿಂದ 2016-17ನೇ ಸಾಲಿನಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೋಟುಗಳ ಅಮಾನ್ಯತೆಯಿಂದ ಆರ್ಥಿಕ ಚಟುವಟಿಕೆಗಳಲ್ಲಿ ತಾತ್ಕಾಲಿಕ ಅಡ್ಡಿಯುಂಟಾಗಿದ್ದರಿಂದ 2016-17ನೇ ಸಾಲಿನಲ್ಲಿ ಭಾರತದ ಬೆಳವಣಿಗೆ ಕುಂಠಿತವಾಗಿ ಶೇಕಡಾ 6.6ರಷ್ಟು ಆಗಿತ್ತು ಎಂದು ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ತನ್ನ ವಾರ್ಷಿಕ ವರದಿಯಲ್ಲಿ ಹೇಳಿದೆ.
ಆದರೂ ನೋಟುಗಳ ಅಮಾನ್ಯತೆಯಿಂದ ಆರ್ಥಿಕತೆಗೆ ತಾತ್ಕಾಲಿಕ ಪರಿಣಾಮ ಮಾತ್ರ ಉಂಟಾಗಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಏರಿಕೆ ಕಂಡುಬಂದು ಶೇಕಡಾ 8ಕ್ಕಿಂತಲೂ ಅಧಿಕ ಪ್ರಗತಿ ಉಂಟಾಗಲಿದೆ ಎಂದು ಹೇಳಿದೆ.
ನವೆಂಬರ್ 8ರ ನಂತರ ನಗದು ಕೊರತೆ ಮತ್ತು ನಗದು ಪಾವತಿ ಕೊರತೆಯಿಂದಾಗಿ ದೇಶಾದ್ಯಂತ ವ್ಯಾಪಾರ, ವಟಿವಾಟು ಕ್ಷೀಣಿಸಿದೆ. ಆರ್ಥಿಕ ಬೆಳವಣಿಗೆಗೆ ಹೊಸ ಸವಾಲುಗಳು ಎದುರಾಗಿವೆ ಎಂದು ಐಎಂಎಫ್ ವಾರ್ಷಿಕ ವರದಿ ತಿಳಿಸಿದೆ. ಭಾರತದ ಆರ್ಥಿಕತೆ 2015-16ರಲ್ಲಿ ಶೇಕಡಾ 7.6ರಷ್ಟು ಬೆಳವಣಿಗೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com