ಸೂಕ್ಷ್ಮ ವಲಯಗಳಲ್ಲಿ ಎಫ್ ಡಿಐ ಅನುಮೋದನೆಗೆ ಪ್ರಮಾಣಿತ ಪ್ರಕ್ರಿಯೆ ರಚಿಸಲಿರುವ ಆರ್ ಬಿಐ

ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಣಯದ ಹಿನ್ನೆಲೆಯಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿಯನ್ನು ರದ್ದುಗೊಳಿಸುವ ಸರ್ಕಾರದ ನಿರ್ಣಯದ ಹಿನ್ನೆಲೆಯಲ್ಲಿ ಸಚಿವಾಲಯಗಳಿಂದ ವಿದೇಶಿ ನೇರ ಹೂಡಿಕೆ ಪ್ರಸ್ತಾವನೆಗಳ ಅನುಮೋದನೆಗೆ ಪ್ರಮಾಣಿತ ಕಾರ್ಯವಿಧಾನ(ಎಸ್ಒಪಿ)ವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೂಪಿಸುವ ನಿರೀಕ್ಷೆಯಿದೆ.
ಸೂಕ್ಷ್ಮ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆ ಅನುಮೋದನೆಗೆ ನಿಯಮಗಳನ್ನು ಸ್ಥಾಪಿಸಲು ಪ್ರಸ್ತಾವನೆ ನೀಡಲಾಗಿದ್ದು ಪ್ರಸ್ತುತ ಅದು ವಿದೇಶಿ ನೇರ ಹೂಡಿಕೆ ನೀತಿಯ ಸರ್ಕಾರದ ಅನುಮೋದನೆಯಲ್ಲಿದೆ. ಈ ವಿಷಯವನ್ನು ಇತ್ತೀಚಿನ ಆಂತರಿಕ-ಸಚಿವಾಲಯ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಉದ್ಯಮ, ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸರ್ಕಾರ ವಿದೇಶಿ ಹೂಡಿಕೆ ಅಭಿವೃದ್ಧಿ ನಿಗಮವನ್ನು ತೆಗೆದುಹಾಕಲು ನಿರ್ಧರಿಸಿದೆ ಮತ್ತು ವಿದೇಶಿ ಹೂಡಿಕೆ ಪ್ರಸ್ತಾವನೆಗಳ ತ್ವರಿತ ವಿಲೇವಾರಿಗೆ ಹೊಸ ಯಾಂತ್ರಿಕ ವ್ಯವಸ್ಥೆಯನ್ನು ರೂಪಿಸಿದೆ.
ಸೂಕ್ಷ್ಮ ವಲಯಗಳಾದ ರಕ್ಷಣೆ, ಟೆಲಿಕಾಂ, ಕಂಪೆನಿಗಳಲ್ಲಿ ಅನುಮತಿ ಹೊಂದಿರುವವರು ಮಾತ್ರ ವಿದೇಶಿ ಹೂಡಿಕೆ ಮಾಡಬಹುದು.
ಈ ಎಲ್ಲಾ ವಿಷಯಗಳು ಪ್ರಸ್ತುತ ಸರ್ಕಾರ ರಚಿಸಿದ ಸಮಿತಿಯಡಿ ಚರ್ಚೆಗೆ ಬರಲಿದೆ. ಸಮಿತಿಯಲ್ಲಿ ಆರ್ ಬಿಐ, ಹಣಕಾಸು ಸಚಿವಾಲಯ, ಕೈಗಾರಿಕಾ ನೀತಿ ಮತ್ತು ಅಭಿವೃದ್ಧಿ ಇಲಾಖೆ ಮತ್ತು ಗೃಹ ಸಚಿವಾಲಯದ ಪ್ರತಿನಿಧಿಗಳು ಇರುತ್ತಾರೆ.
ವಿದೇಶಿ ಹೂಡಿಕೆ ಮತ್ತು ವಿದೇಶಿ ವಿನಿಮಯಕ್ಕೆ ಆರ್ ಬಿಐ ಆಡಳಿತ ಆಯಕಟ್ಟಿನ ಸಂಸ್ಥೆಯಾಗಿದೆ. ಈ ಸಮಿತಿ ಇನ್ನೆರಡು ತಿಂಗಳೊಳಗೆ ವರದಿ ನೀಡುವ ನಿರೀಕ್ಷೆಯಿದೆ. ಅದು ಸೂಕ್ಷ್ಮ ವಲಯಗಳಲ್ಲಿ ವಿದೇಶಿ ನೇರ ಹೂಡಿಕೆಯ ಅನುಮೋದನೆಗೆ ವಿಧಾನದ ಮಾರ್ಗಸೂಚಿಗಳನ್ನು ನೀಡಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com