ಎಟಿಎಂ ಉಚಿತ ಬಳಕೆಗೂ ಕೇಂದ್ರ ಕತ್ತರಿ, ತಿಂಗಳಿಗೆ 8ರಿಂದ 3ಕ್ಕೆ ಇಳಿಸುವ ಸಾಧ್ಯತೆ

ಎಟಿಎಂನಲ್ಲಿ ನೀವು ಬಯಸಿದ್ದಷ್ಟು ಹಣ ಬರುತ್ತಿಲ್ಲ ಎಂದು ಪೇಚಾಡುತ್ತಿರುವವರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಎಟಿಎಂನಲ್ಲಿ ನೀವು ಬಯಸಿದ್ದಷ್ಟು ಹಣ ಬರುತ್ತಿಲ್ಲ ಎಂದು ಪೇಚಾಡುತ್ತಿರುವವರಿಗೆ ಈಗ ಮತ್ತೊಂದು ಶಾಕಿಂಗ್ ಸುದ್ದಿ. 
ಹೌದು. ಎಟಿಎಂ ಉಚಿತ ಬಳಕೆಗೂ ಕತ್ತರಿ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಯಾವುದೇ ಡೆಬಿಟ್‌ಕಾರ್ಡ್‌ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 8 ಬಾರಿ ಬದಲು ಕೇವಲ ಮೂರು ಬಾರಿ ಮಾತ್ರ ಉಚಿತ ವ್ಯವಹಾರ ನಡೆಸಲು ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ.
ಎಟಿಎಂಗಳಲ್ಲಿ ಈವರೆಗೆ ಇದ್ದ 8 ಬಾರಿ ಉಚಿತ ವ್ಯವಹಾರವನ್ನು 3 ಬಾರಿಗೆ ಇಳಿಸಬೇಕು ಎಂದು ಬ್ಯಾಂಕ್‍ಗಳು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾಪವನೆ ಸಲ್ಲಿಸಿದ್ದು, ಈ ಬಗ್ಗೆ ಕೇಂದ್ರ ಸರ್ಕಾರ ಈಗಾಗಲೇ ಹಣಕಾಸು ಸಚಿವಾಲಯದೊಂದಿಗೆ ಚರ್ಚಿಸಿದೆ. ನಗದು ರಹಿತ ವಹಿವಾಟಿಗೆ ಉತ್ತೇಜನ ನೀಡುವುದು ಇದರ ಉದ್ದೇಶವಾಗಿದೆ ಎಂದು ಬ್ಯಾಂಕ್‍ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈಗಿರುವ ನಿಯಮದ ಪ್ರಕಾರ ಡೆಬಿಟ್‌ಕಾರ್ಡ್‌ ಬಳಕೆದಾರರು ತಮ್ಮ ಬ್ಯಾಂಕಿನ ಎಟಿಎಂಗಳಲ್ಲಿ ತಿಂಗಳಿಗೆ 5 ಬಾರಿ ಉಚಿತ ವ್ಯವಹಾರ ಹಾಗೂ ಇತರ ಬ್ಯಾಂಕಿನ ಎಟಿಎಂಗಳಲ್ಲಿ ಮಾಸಿಕ 3 ಬಾರಿ ಉಚಿತ ವ್ಯವಹಾರ ನಡೆಸಬಹುದಾಗಿದೆ. ಆನಂತರ ಪ್ರತಿ ವಹಿವಾಟಿಗೂ 20 ರುಪಾಯಿ ಶುಲ್ಕ ವಿಧಿಸಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com