ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಚಿಂತನೆ!

ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಚಿಂತನೆ ನಡೆಸಿದೆ.
ಮೈಕ್ರೋಸಾಫ್ಟ್
ಮೈಕ್ರೋಸಾಫ್ಟ್
ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಹಾಕಲು ಮೈಕ್ರೋಸಾಫ್ಟ್ ಚಿಂತನೆ ನಡೆಸಿದೆ. 
ಕ್ಲೌಡ್ ಕಂಪ್ಯೂಟಿಂಗ್ ಮೇಲೆ ಅವಲಂಬಿತವಾಗಿ ಸಾಫ್ಟ್ವೇರ್ ಕೊಲೋಸಸ್ ನ್ನು ಉದ್ಯಮದ ಪ್ರಮುಖ ಭಾಗವಾಗಿಸಿಕೊಳ್ಳುವತ್ತ ಹೆಚ್ಚಿನ ಗಮನ ಕೇಂದ್ರೀಕರಿಸಿರುವ ಪರಿಣಾಮವಾಗಿ ಮೈಕ್ರೋಸಾಫ್ಟ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಕ್ಕೆ ಕತ್ತರಿ ಬೀಳಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಮೈಕ್ರೋಸಾಫ್ಟ್ ನ ಈ ನಡೆಯನ್ನು ವಿಶ್ಲೇಷಿಸಿರುವ ಅನೇಕ ವರದಿಗಳು, ಸಂಸ್ಥೆಯಲ್ಲಿ ಬೃಹತ್ ಪ್ರಮಾಣದಲ್ಲಿ ಉದ್ಯೋಗಗಳಿಗೆ ಕತ್ತರಿ ಬೀಳಲಿದೆ ಎಂದು ಹೇಳುತ್ತಿವೆ. ಇನ್ನು ಸಂಸ್ಥೆಯಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನೂ ಒಪ್ಪಿಕೊಂಡಿರುವ ಮೈಕ್ರೋಸಾಫ್ಟ್, ಗ್ರಾಹಕರಿಗೆ ಹಾಗೂ ಪಾಲುದಾರರಿಗೆ ಅತ್ಯುತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ಹೇಳಿದೆ. 
ಸಾಫ್ಟ್ ವೇ ನ ಮೇಲಿನ ಗಮನವನ್ನು ಕಡಿಮೆಗೊಳಿಸಿ, ಕ್ಲೌಡ್ ಕಂಪ್ಯೂಟಿಂಗ್ ಹಾಗೂ ಉದ್ಯಮ ಸೇವೆಗಳತ್ತ ಹೆಚ್ಚಿನ ಗಮನ ಹರಿಸಲು ಮೈಕ್ರೋಸಾಫ್ಟ್ ನ ಸಿಇಒ ಸತ್ಯ ನಾದೆಳ್ಲ ಸೂಚನೆ ನೀಡಿದ್ದಾರೆ. ಡಿಜಿಟಲ್ ಟ್ರಾನ್ಸ್ಫಾರ್ಮೇಷನ್ ಗಳಿಗಾಗಿ ಬಹುರಾಷ್ಟ್ರೀಯ ಉದ್ಯಮದಿಂದ, ಮಧ್ಯಮ ಗಾತ್ರದ ಉದ್ಯಮ, ಲಾಭ ರಹಿತ ಸಂಸ್ಥೆಗಳ ವರೆಗೂ ವಿಶ್ವಾದ್ಯಂತ ಎಲ್ಲಾ ಸಂಸ್ಥೆಗಳು ಮೈಕ್ರೋಸಾಫ್ಟ್ ನ ಕ್ಲೌಡ್ ಪ್ಲಾಟ್ ಫಾರ್ಮ್ ಗಳನ್ನೇ ಬಳಕೆ ಮಾಡಿಕೊಳ್ಳುತ್ತಿವೆ ಎಂದು ಸತ್ಯ ನಾದೆಳ್ಲ ಹೇಳಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಮೈಕ್ರೋಸಾಫ್ಟ್ ಸಾವಿರಗಟ್ಟಲೆ ಉದ್ಯೋಗಗಳನ್ನು ಕಡಿತಗೊಳಿಸಿತ್ತು. 2014 ರಲ್ಲಿ ಅತಿ ಹೆಚ್ಚು ಅಂದರೆ 18,000 ಉದ್ಯೋಗಗಳನ್ನು ಕಡಿತಗೊಳಿಸಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com