ಆಧಾರ್ ನೊಂದಿಗೆ 7.36 ಕೋಟಿಗೂ ಅಧಿಕ ಪ್ಯಾನ್ ಸಂಖ್ಯೆಗಳ ಜೋಡಣೆ

ಇಲ್ಲಿಯವರೆಗೆ ಸುಮಾರು 30 ಕೋಟಿ ಜನರು ತಮ್ಮ ಪ್ಯಾಸ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಇಲ್ಲಿಯವರೆಗೆ ಸುಮಾರು 30 ಕೋಟಿ ಜನರು ತಮ್ಮ ಪ್ಯಾಸ್ ಸಂಖ್ಯೆಯನ್ನು ಆಧಾರ್ ಸಂಖ್ಯೆಗೆ ಜೋಡಣೆ ಮಾಡಿದ್ದಾರೆ. ಸುಮಾರು ಒಂದು ಕೋಟಿಗೂ ಅಧಿಕ ಜನರು ಕಳೆದ ತಿಂಗಳಲ್ಲಿಯೇ ಜೋಡಣೆ ಮಾಡಿಕೊಂಡಿದ್ದಾರೆ.
ಜುಲೈ 1ರಿಂದ ಆದಾಯ ತೆರಿಗೆ ಪಾವತಿಸಲು ಮತ್ತು ಹೊಸ ಪ್ಯಾನ್ ಸಂಖ್ಯೆಯನ್ನು ಪಡೆಯಲು ಪ್ಯಾನ್ ಸಂಖ್ಯೆ ಮತ್ತು ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡುವುದು ಕಡ್ಡಾಯ ಎಂದು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದ ನಂತರ ಈ ಸಂಖ್ಯೆ ಹೆಚ್ಚಳವಾಗಿದೆ.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್ ಸೈಟ್ ನಲ್ಲಿ ದಾಖಲಾತಿ ಮಾಡಿಕೊಂಡ 6.44 ಕೋಟಿ ಇ-ಫೈಲರ್ ಗಳ ಪೈಕಿ ಆಧಾರ್-ಪ್ಯಾನ್ ಜೋಡಣೆ ಸುಮಾರು 3.06 ಕೋಟಿ ಜನರು ಮಾಡಿಕೊಂಡಿದ್ದಾರೆ. ಒಟ್ಟು 7.36 ಕೋಟಿ ಮಂದಿ ಆಧಾರ್-ಪ್ಯಾನ್ ಸಂಖ್ಯೆಯನ್ನು ಇದುವರೆಗೆ ಜೋಡಿಸಿಕೊಂಡಿದ್ದಾರೆ ಎಂದು ಇತ್ತೀಚಿನ ವರದಿ ತಿಳಿಸಿದೆ. 
ಮೊನ್ನೆ ಜುಲೈ 1ರಿಂದ ಪ್ಯಾನ್ ಸಂಖ್ಯೆಯನ್ನು ಆಧಾರ್ ಗೆ ಜೋಡಿಸಲು ಸಾಧ್ಯವಾಗದವರಿಗೆ ಇ-ಐಟಿಆರ್ ನಲ್ಲಿ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ ನೀಡಿರುವ ಸಂಖ್ಯೆಯನ್ನು ನಮೂದಿಸುವ ಆಯ್ಕೆಯಿದೆ. ಇದು ಎರಡು ವಿಶಿಷ್ಟ ಸಂಖ್ಯೆಗಳನ್ನು ಸಂಪರ್ಕಿಸಲು ಇರುವ ಮಾನ್ಯ ಎಂದು ಪರಿಗಣಿಸಲಾಗುತ್ತದೆ.
ವರ್ಷಕ್ಕೆ 5 ಲಕ್ಷಕ್ಕಿಂತ ಕಡಿಮೆ ವರಮಾನ ಹೊಂದಿರುವ ಮತ್ತು 80 ವರ್ಷಕ್ಕಿಂತ ಮೇಲ್ಪಟ್ಟವರನ್ನು ಹೊರತುಪಡಿಸಿ ಉಳಿದವರೆಲ್ಲರಿಗೂ ಆದಾಯ ತೆರಿಗೆಯ ಇ-ಫೈಲಿಂಗ್ ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com