ಜೂನ್ 30ರ ಹಿಂದಿನ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಜಿಎಸ್ಟಿ ಅನ್ವಯವಾಗಲ್ಲ!

ಜುಲೈ 1ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದಿದ್ದು ಜೂನ್ 30 ರ ಹಿಂದಿನ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಜಿಎಸ್‍ಟಿ...
ಹಸ್‌ಮುಖ್ ಆಧಿ
ಹಸ್‌ಮುಖ್ ಆಧಿ
ನವದೆಹಲಿ: ಜುಲೈ 1ರಿಂದ ದೇಶಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದಿದ್ದು ಜೂನ್ 30 ರ ಹಿಂದಿನ ಕ್ರೆಡಿಟ್ ಕಾರ್ಡ್ ಬಿಲ್ ಗಳಿಗೆ ಜಿಎಸ್‍ಟಿ ಅನ್ವಯವಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದಾರೆ. 
ಜೂನ್ ತಿಂಗಳಲ್ಲಿ ಕ್ರೆಡಿಟ್ ಕಾರ್ಡ್ ಮತ್ತು ಮೊಬೈಲ್/ಟೆಲಿಫೋನ್ ಬಿಲ್ ಗಳು ರಚನೆಗೊಂಡಿದ್ದರೆ ಅಂತಹ ಬಿಲ್ ಗಳ ಮೇಲೆ ಶೇಖಡ 18ರಷ್ಟು ಜಿಎಸ್‍ಟಿ ಅನ್ವಯಿಸುವುದಿಲ್ಲ ಎಂದು ಕೇಂದ್ರ ಕಂದಾಯ ಕಾರ್ಯದರ್ಶಿ ಹಸ್‌ಮುಖ್ ಆಧಿ ಹೇಳಿದ್ದಾರೆ. 
ಜೂನ್ ಮುನ್ನ ರಚಿತಕೊಂಡಿರುವ ಬಿಲ್ ಗಳಿಗೆ ಶೇಖಡ 15ರಷ್ಟು ಸರ್ವಿಸ್ ಟ್ಯಾಕ್ಸ್ ಮಾತ್ರ ಕಟ್ಟಬೇಕಾಗುತ್ತದೆ. ಇನ್ನು ಇನ್ಶೂರೇನ್ಸ್ ಕಂತುಗಳಿಗೂ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. 
ಭಾರತದಲ್ಲಿ ಹೆಚ್ಚಾಗಿ ಉದ್ಯಮಿಗಳು ಎರಡು ತಿಂಗಳ ಕ್ರೆಡಿಟ್ ಮೇಲೆ ವ್ಯವಹಾರ ನಡೆಸುತ್ತಾರೆ. ಹೀಗಿರುವ ಜೂನ್ ತಿಂಗಳಲ್ಲಿ ಬಿಲ್ ಗಳು ರಚಿತವಾಗಿದ್ದರೆ ಅಂತಹ ಬಿಲ್ ಗಳಿಗೆ ಸರ್ವಿಸ್ ಟ್ಯಾಕ್ಸ್ ಮಾತ್ರ ಅನ್ವಯವಾಗುತ್ತದೆ ಎಂದು ಆಧಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com